fbpx
ಸಮಾಚಾರ

ಮೋದಿಯನ್ನು ಹೊಗಳುವ ಭರದಲ್ಲಿ ಭಾರತಕ್ಕೆ ಅವಮಾನ ಮಾಡಿದ ಚಕ್ರವರ್ತಿ ಸೂಲಿಬೆಲೆ.

ಮಾತೆತ್ತಿದರೆ ವಿಶ್ವಗುರು, ಅಖಂಡ ಭಾರತ, ದೇಶ ಪ್ರೇಮ ಅನ್ನುತ್ತಲೇ ಸದ್ಯ ಪ್ರಧಾನಿ ಮೋದಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿರುವವರು ಲೇಖಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ.. ತಮ್ಮ ಏಕಮುಖ ಆಲೋಚನೆಗಳ ಮೂಲಕವೇ ಬೆಂಬಲಿಗರು ಮತ್ತು ವಿರೋಧಿಗಳನ್ನು ಸಮನಾಗಿ ಹೊಂದಿರುವ ಸೂಲಿಬೆಲೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.. ತಾವು ಫೇಸ್ಬುಕ್ ನಲ್ಲಿ ಪ್ರಕಟಿಸಿರುವ ಮಾಡಿರುವ ಪೋಸ್ಟ್ ವೊಂದರಲ್ಲಿ ಭಾರತಕ್ಕೆ ಅವಮಾನ ಮಾಡಿದ್ದಾರೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಯುವಬ್ರಿಗೇಡ್ ಎಂಬ ಟೀಮ್ ಮೂಲಕ ಮೋದಿ ಪರವಾಗಿ ಪ್ರಚಾರ ಮಾಡಿದ್ದ ಸೂಲಿಬೆಲೆ ಈ ಭಾರಿ ‘ಟೀಮ್ ಮೋದಿ’ ಎಂಬ ಮತ್ತೊಂದು ತಂಡದಲ್ಲಿ ಸಕ್ರಿಯರಾಗಿದ್ದಾರೆ. ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮಗಳನ್ನ ಕೈಗೊಳ್ಳುತ್ತಿರುವ ಸೂಲಿಬೆಲೆ ಅದನೆಲ್ಲಾ ತಮ್ಮ ಫೇಸ್ಬುಕ್ ನಲ್ಲಿ ದಾಖಲಿಸಿ ‘ಟೀಮ್ ಮೋದಿ’ ಸಂಘಟನೆಯನ್ನು ಹುರಿದುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ.. ಆದರೆ ಈ ಬಾರಿ ಪ್ರಧಾನಿ ಮೋದಿಯ ಕಾರ್ಯವೈಖರಿ ಬಗ್ಗೆ ಹೊಗಳುವ ಭರದಲ್ಲಿ ಭಾರತವನ್ನು ಅವಮಾನಿಸಿ ಸುದ್ದಿಯಾಗಿದ್ದಾರೆ.

 

 

“#ಟೀಂಮೋದಿ ಕಾರ್ಯಾಗಾರಕ್ಕೆ #ಹೊಸಪೇಟೆ ಯಲ್ಲಿ ಅತ್ಯದ್ಭುತ ಪ್ರತಿಕ್ರಿಯೆ ದೊರೆಯಿತು. ಪ್ರಜ್ಞಾವಂತರು ಮತ್ತು ಕಾರ್ಯಕರ್ತರು ಇಬ್ಬರೂ ಇದ್ದರು. ಭಿಕ್ಷೆ ಬೇಡುವ ರಾಷ್ಟ್ರವಾಗಿದ್ದ ಭಾರತ ಮೋದಿಯವರ ಅಧಿಕಾರಾವಧಿಯಲ್ಲಿ ಹೇಗೆ ಸವಾಲನ್ನು ಸಮರ್ಥವಾಗಿ ಎದುರಿಸುವ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂಬುದನ್ನು ವಿವರಿಸಿದೆ. ಎಲ್ಲರೂ ಈಗ ಕೆಲಸ ಮಾಡಲು ಸಿದ್ಧ..” ಇತ್ತೀಚಿಗೆ ಭಾಗವಹಿಸಿದ್ದ ಕಾರ್ಯಕ್ರಮವೊಂದರ ಕುರಿತು ಪೋಸ್ಟ್ ಮಾಡಿರುವ ಸೂಲಿಬೆಲೆ ಈ ರೀತಿ ಬರೆದುಕೊಂಡಿದ್ದಾರೆ.

ನಮ್ಮ ದೇಶ ಭಾರತವನ್ನು “ಭಿಕ್ಷೆ ಬೇಡುವ ರಾಷ್ಟ್ರವಾಗಿದ್ದ ಭಾರತ” ಎಂದು ಉಲ್ಲೇಖಿಸಿದ್ದಕ್ಕೆ ಸೂಲಿಬೆಲೆ ವಿರುದ್ಧ ಪ್ರಜ್ಞಾವಂತ ನಿಜವಾದ ದೇಶಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಅಪ್ರತಿಮ ದೇಶಭಕ್ತ(?) ಚಕ್ರವರ್ತಿ ಸೂಲಿಬೆಲೆಯವರು ರಾಷ್ಟ್ರಭಕ್ತಿಗಿಂತ ಮೋದಿ ಭಕ್ತಿಗಿಂತಯೇ ಮುಖ್ಯವಾಯಿತೇ? ನೆಚ್ಚಿನ ನಾಯಕನನ್ನು ಹೊಗಳೋಕೆ ದೇಶವನ್ನೂ ಹೀನಾಯವಾಗಿಬಿಂಬಿಸಬಹುದೇ? ಎಂಬೆಲ್ಲಾ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ..

ಇನ್ನು ಕೆಲವರು ಸೂಲಿಬೆಲೆ ಹೇಳಿಕೆಯನ್ನು ಬೆಂಬಲಕ್ಕೆ ನಿಂತಿದ್ದು “ಭಿಕ್ಷೆ ಬೇಡುವ ರಾಷ್ಟ್ರವಾಗಿದ್ದ ಭಾರತ” ಎಂಬ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top