fbpx
ಮನೋರಂಜನೆ

ಪಾಕ್ ನಲ್ಲಿ ಅಬ್ಬರಿಸಿ ಬೊಬ್ಬೆರೆದ ಕೆಜಿಎಫ್ : ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಪ್ರಶಾಂತ್ ನೀಲ್ ನಿರ್ದೇಶನದ , ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿರುವ ವಿಷಯ ನಮ್ಮೆಲ್ಲರಿಗೂ ಗೊತ್ತೇ ಇದೆ, ಗೊತ್ತಾಗುತ್ತಲೂ ಇದೆ. 200 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ಒಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಹೌದು,ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ ಪಾಕಿಸ್ತಾನದಲ್ಲೂ ಧೂಳೆಬ್ಬಿಸುತ್ತಿದೆ. ಹೌದು, ಪಾಕಿಸ್ತಾನದಲ್ಲಿ ರಿಲೀಸ್​ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ ತನ್ನ ಮುಡಿಗೇರಿಸಕೊಂಡಿದ್ದು ಬಾಕ್ಸ್ ಆಫೀಸ್ನಲ್ಲೂ ದಾಖಲೆ ಬರೆಯುತ್ತಿದೆ.

ಬಿಡುಗಡೆಯಾದ ಮೊದಲ ದಿನವೇ ಕೆಜಿಎಫ್ 0.81 ಕೋಟಿ ರುಪಾಯಿ(81 ಲಕ್ಷ) ಗಳಿಸಿದ್ದು, ಕನ್ನಡ ಚಿತ್ರವೊಂದು ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಈ ಮಟ್ಟಗಿನ ಯಶಸ್ಸನ್ನು ತನ್ನದಾಗಿಸಿ ಕೊಂಡಿರುವುದು ಶ್ಲಾಘನೀಯವೇ ಸರಿ.

ಕೆಜಿಎಫ್ ಸಿನಿಮಾದ ಬಿಡುಗಡೆಯ ಮುನ್ನ ಟ್ರೈಲರ್ ಗಳನ್ನೂ ನೋಡಿ ಫಿದಾ ಆಗಿದ್ದ ಪಾಕಿಸ್ತಾನದ ಅಭಿಮಾನಿಗಳು, ಕೆಜಿಎಫ್‌ ರಿಲೀಸ್ ಗಾಗಿ ಕಾಯುತ್ತಿದ್ದರು. ಅದರಂತೆ ಕೆಜಿಎಫ್‌ ಟ್ರೈಲರ್ ನೋಡಿದ ಪಾಕಿಸ್ತಾನದ ಯುವಕನೊಬ್ಬ ‘ಕೆಜಿಎಫ್‌​ ಟ್ರೈಲರ್’ ನೋಡಿ ‘ಇದೊಂದು ಗ್ರೇಟ್​ ಟ್ರೈಲರ್​’ ಮಾಮೂಲಿ ಸಲ್ಮಾನ್​ ಖಾನ್​ ಸಿನಿಮಾ ಇದಲ್ಲ. ಸಲ್ಮಾನ್​ ಸಿನಿಮಾಗೂ ಮೀರಿದ ಸಿನಿಮಾ. ನಾನಂತೂ ಖಂಡಿತಾ ಸಿನಿಮಾ ನೋಡ್ತೀನಿ’ ಅಂತಾ ಮನಸಾರೆ ಹಾಡಿ ಹೊಗಳಿ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದನು ಹೀಗಾಗಿ ಸಹಜವಾಗಿ ಕೆಜಿಎಫ್ ಸಿನಿಮಾದ ಬಗ್ಗೆ ಪಾಕಿಸ್ತಾನದಲ್ಲೂ ಕ್ರೇಜ್ ಶುರುವಾಗಿತ್ತು. ಒಟ್ಟಿನಲ್ಲಿ ಏನೇ ಆಗಲಿ ಕನ್ನಡ ಸಿನಿಮಾವೊಂದು ಪಾಕಿಸ್ತಾನದಲ್ಲಿ ರಿಲೀಸ್ ಆಗಿ ಇತಿಹಾಸ ಸೃಷ್ಟಿಸಿರುವುದು ಹೆಮ್ಮೆಯ ವಿಚಾರವಲ್ಲದೆ ಮತ್ತೇನು ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top