fbpx
ಸಮಾಚಾರ

14ರ ಹರೆಯದ ಬಾಲಕಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬ್ಬಾದ ರಾಹುಲ್ ಗಾಂಧಿ !

ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಂಡಿಸಿದ್ದಾರೆ. ಈ ವೇಳೆ ೧೪ ರ ಹರೆಯದ ಪುಟ್ಟ ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ರಾಹುಲ್ ತಬ್ಬಿಬಾದ ಘಟನೆಯೊಂದು ದುಬೈ ನಲ್ಲಿ ನಡೆದಿದೆ.

ಹೌದು, ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭದಲ್ಲಿ. 14 ವರ್ಷದ ಬಾಲಕಿಯೊಬ್ಬಳು ರಾಹುಲ್ ಗಾಂಧಿಗೆ ಎರಡು ಪ್ರಮುಖ ಪ್ರಶ್ನೆಗಳನ್ನು ಕೇಳಿದಳು.

ಅಂದಹಾಗೆ 14 ವರ್ಷದ ಕಿನ್ನರಿ ಕೇಳಿದ ಪ್ರಶ್ನೆಗಳಾವುವು ಗೊತ್ತೇ ?

ರಾಹುಲ್ ಗಾಂಧಿ ಭಾಷಣದ ಬಳಿಕ ಪ್ರಶ್ನೆ ಕೇಳಲು ಕೈ ಎತ್ತಿದ ಬಾಲಕಿ, ‘ಜಾತಿ ನಿರ್ಮೂಲನೆ, ಜಾತ್ಯಾತೀತತೆ ಬಗ್ಗೆ ಮಾತನಾಡುವ ನೀವು ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗುಡಿ ಗುಂಡಾಂತರಗಳನ್ನು ಸುತ್ತಿದ್ದು ಮತ್ತು ಕಾಶ್ಮೀರ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದು ಸರಿಯೇ ?’ ಎಂದು ನೇರವಾಗಿ ಪ್ರಶ್ನಿಸಿದಳು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿಯವರು ‘ತಾನೂ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣತ್ತೇನೆ’ ಎಂದರೂ.

ಇದಾದ ಬಳಿಕ ಮತ್ತೊಂದು ಪ್ರಶ್ನೆಯನ್ನು ಕೇಳಿದ ಆ ಬಾಲಕಿ,” ದೇಶವನ್ನು ದೀರ್ಘ ಅವಧಿಗೆ ಆಳಿದ ಕಾಂಗ್ರೆಸ್ ಈ ಕುರಿತು ಹೆಮ್ಮೆ ಪಡುತ್ತದೆ. ಆದರೆ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಇಂದಿಗೂ ಹಾಗೆ ಇರಲು ಕಾರಣವೇನು?” ಎಂದು ಕೇಳಿದಳು. ಬಾಲಕಿಯ ಈ ಪ್ರಶ್ನೆಯ ಕೇಳಿ ತಬ್ಬಿಬಾದ ರಾಹುಲ್ ಗಾಂಧಿ ಬಾಲಕಿಯ ಈ ಪ್ರಶ್ನೆಗೆ ಏನೂ ಉತ್ತರಿಸದೆ ಸುಮ್ಮನಾದರೂ.

ಒಟ್ಟಿನಲ್ಲಿ 14 ರ ಬಾಲಕಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸದೆ ಇದಿದ್ದು ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ನಗೆಚಟಾಕಿಗಳನ್ನು ಸೃಷ್ಟಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top