ಸಮಾಚಾರ

ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ‘ಡಿ ಬಾಸ್’ ಹೆಸರಿನ ಬೆಳ್ಳಿ ಕಡಗ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಈ ಸಾರಿ ಆಚರಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದರೂ, ಅವರ ಅಭಿಮಾನಿಗಳು ಮಾತ್ರ ದರ್ಶನ್ ರವರ ಹುಟ್ಟುಹಬ ವನ್ನು ವಿಭಿನ್ನವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಫೆಬ್ರವರಿ 16 ಕ್ಕೆ ದರ್ಶನ್ ರವರ 42 ನೇ ಹುಟ್ಟು ಹಬ್ಬವಿದ್ದು, ದರ್ಶನ್ ರವರ ಬರ್ತ್ ಡೇ ಅನ್ನು ಅವರ ಅಭಿಮಾನಿಗಳು ‘ಡಿ ಬಾಸ್ ‘ ಎಂದು ಬರೆದಿರುವ ಬೆಳ್ಳಿ ಖಡ್ಗವನ್ನು ಧರಿಸುವುದರ ಮೂಲಕ ಆಚರಿಸಲಿದ್ದಾರೆ.

ಹೌದು, ಈ ಹಿಂದೆ ದರ್ಶನ್ ರವರ ಹೆಸರನ್ನು ಕೈ ಮೇಲೆ ಮತ್ತು ಎದೆ ಮೇಲೆ ಅವರ ಅಭಿಮಾನಿಗಳೂ ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನದ ಪರಾಕಾಷ್ಠೆ ಮೆರೆದಿದ್ದರು . ಆದರಂತೆ ಈ ಸಾರಿ ‘ ಡಿ ಬಾಸ್ ‘ ಬೆಳ್ಳಿ ಕಡಗ ಟ್ರೆಂಡ್ ಶುರುವಾಗಿದ್ದು. ಈ ಬೆಳ್ಳಿ ಕಡಗವನ್ನು ಧರಿಸುವುದರ ಮೂಲಕ ಅಭಿಮಾನದ ಹೊಳೆಯನ್ನೇ ಹರಿಸಲಿದ್ದಾರೆ. ಅಂದಹಾಗೆ ಈ ಬೆಳ್ಳಿ ಕಡಗ ಹಲವಾರು ಜ್ಯುವೆಲರಿ ಅಂಗಡಿಗಳಲ್ಲಿ ಲಭ್ಯವಿದೆ.

ಆದರೆ ದರ್ಶನ್ ರವರು ಮಾತ್ರ ‘ನಾನು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ. ನನ್ನ ಅಭಿಮಾನಿಗಳಿಗೂ ಅದನ್ನು ಹೇಳಿದ್ದೇನೆ. ಎಂದಿನ ಹುಟ್ಟುಹಬ್ಬದ ಸಂಭ್ರಮ ಈ ಸಲ ಇರುವುದಿಲ್ಲ. ಅಭಿಮಾನಿಗಳು ಈ ಬಾರಿ ನನ್ನ ಬರ್ತ್‌ಡೇ ಆಚರಿಸುವುದು ಬೇಡ. ಯಾರೇ ಕೇಕ್‌ ತಂದರೂ ಕಟ್‌ ಮಾಡುವುದಿಲ್ಲ. ಇದೊಂದು ವರ್ಷ ಆಚರಣೆ ಬೇಡ. ಮುಂದಿನ ವರ್ಷ ಎಂದಿನಂತೆಯೇ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ತೀನಿ’ ಎಂದು ಹೇಳಿದ್ದಾರೆ.

 

 

ಒಟ್ಟಿನಲ್ಲಿ ದರ್ಶನ್ ಈ ಸಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂಬ ಸಂಗತಿ ಅವರ ಅಭಿಮಾನಿಗಳಿಗೆ ಬೇಸರ ತಂದಿದ್ದು. ಮುಂದಿನ ದಿನಗಳಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ದರ್ಶನ್ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾರೋ ಅಥವಾ ತಾವು ತೆಗೆದುಕೊಂಡಿರುವ ನಿಲುವಿಗೆ ಬದ್ಧರಾಗಿರುತ್ತಾರೋ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top