fbpx
ಮನೋರಂಜನೆ

ಶಿವಣ್ಣ ಸಿನಿಮಾಗಾಗಿ ಕನ್ನಡ ಕಲಿತ ಬಾಲಿವುಡ್ ನಟ ವಿವೇಕ್ ಒಬೆರಾಯ್- ಡಬ್ಬಿಂಗ್ ನಲ್ಲೂ ಭಾಗಿ!

ರವಿ ವರ್ಮಾ ನಿರ್ದೇಶನದ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಕನ್ನಡದ ಬಹು ನೀರಿಕ್ಷಿತ ‘ರುಸ್ತುಂ’ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್​ ಒಬೆರಾಯ್ ಬಣ್ಣ ಹಚ್ಚಿದ್ದಾರೆ.

ಅಂದಹಾಗೆ, ‘ರುಸ್ತುಂ’ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್​ ಒಬೆರಾಯ್ ಪೊಲೀಸ್​ ಪಾತ್ರ ದಲ್ಲಿ ತೆರೆಯ ಮೇಲೆ ಮಿಂಚಲಿದ್ದಾರೆ.

ಈ ಮೊದಲು ಬಿಡುಗಡೆಯಾದ ಚಿತ್ರದ ಪೋಸ್ಟರ್​ ಮೂಲಕ ನಟ ವಿವೇಕ್​ ಒಬೆರಾಯ್ ಈ ಚಿತ್ರದಲ್ಲಿ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿತ್ತು.

ಈಗಾಗಲೇ ಶೂಟಿಂಗ್​ ಮುಗಿಸಿಕೊಂಡಿರುವ ಚಿತ್ರತಂಡ ಡಬ್ಬಿಂಗ್ ನಡೆಸುತ್ತಿದ್ದು ವಿಶೇಷವಾಗಿ ಈ ಕೆಲಸದಲ್ಲಿ ವಿವೇಕ್​ ಕೂಡ ಪಾಲ್ಗೊಳ್ಳಲಿದ್ದು , ಈ ವೇಳೆ ತಾವೇ ಧ್ವನಿ ನೀಡುವುದಾಗಿ ವಿವೇಕ್​ ಹೇಳಿಕೊಂಡಿದ್ದಾರೆ. ಕನ್ನಡ ಕಲಿಯುವುದರ ಬಗೆಗಿನ ಅವರಿಗಿರುವ ಆತ್ಮವಿಶ್ವಾಸ ನೋಡಿದ ಚಿತ್ರತಂಡ ಖುಷಿ ಪಟ್ಟಿದೆ.

ಚಿತ್ರತಂಡ ಡಬ್ಬಿಂಗ್ ಕಲಾವಿದರ ಹುಡುಕಾಟದಲ್ಲಿರುವಾಗ ನಟ ವಿವೇಕ್ ಒಬೆರಾಯ್ ಖುದ್ದಾಗಿ ತಾನೇ ಧ್ವನಿ ನಿಡುತ್ತೇನೆ ಎಂದು ಹೇಳಿರುವುದು ಇಡೀ ಚಿತ್ರತಂಡಕ್ಕೆ ಸಂತಸವನ್ನು ನೀಡಿದೆ.

ಬಾಲಿವುಡ್​ನ ಖ್ಯಾತ ಸಂಸ್ಥೆ ಯಶ್​ ರಾಜ್​ ಸ್ಟುಡಿಯೋದಲ್ಲಿ ಈ ಸಿನಿಮಾದ ಡಬ್ಬಿಂಗ್​ ಕೆಲಸಗಳು ನಡೆಯಲಿದ್ದು .ಜ.20ರಿಂದ ಈ ಕೆಲಸಗಳು ಆರಂಭಗೊಳ್ಳಲಿದೆ. ಅನೂಪ್​ ಸೆಲಿನ್​ ಸಂಗೀತ ಸಂಯೋಜನೆ ಇರುವ ಈ ಚಿತ್ರದಲ್ಲಿ, ಶ್ರದ್ಧಾ ಶ್ರೀನಾಥ್​, ಮಯೂರಿ, ರಚಿತಾ ರಾಮ್​ ಬಣ್ಣ ಹಚ್ಚಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top