ಸಿನಿಮಾ

ಮುದ್ದು ಮಗಳಿಗೆ ಅನು ಪ್ರಭಾಕರ್ ದಂಪತಿ ಇಟ್ಟ ಹೆಸರೇನು ಗೊತ್ತಾ?

ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ತಮ್ಮ ಮುದ್ದು ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ತಮ್ಮ ಪತಿ ರಘು ಮುಖರ್ಜಿ ಮತ್ತು ಮುದ್ದು ಮಗಳ ಜೊತೆಗಿನ ಫೋಟೋವನ್ನು ಅನು ಪ್ರಭಾಕರ್ ಹಂಚಿಕೊಳ್ಳುವ ಮೂಲಕ ಮಗಳನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ.

 

 

ಪುತ್ರಿಗೆ ನಂದನ ಪ್ರಭಾಕರ್ ಮುಖರ್ಜಿ ಎಂದು ಹೆಸರಿಟ್ಟ ದಂಪತಿ
“ನಿಮೆಲ್ಲರಿಗೂ ಪರಿಚಯಿಸುತಿದ್ದೀವಿ ನಮ್ಮ ಮಗಳು `ನಂದನ ಪ್ರಭಾಕರ್ ಮುಖರ್ಜಿ’” ಎಂದು ಬರೆದು ಮೂವರ ಫೋಟೋ ಸಮೇತ ಅನು ಪ್ರಭಾಕರ್ ಪೋಸ್ಟ್ ಮಾಡಿದ್ದಾರೆ.. ಈ ಟ್ವೀಟ್ ಅನ್ನು ಪತಿ ರಘು ಮುಖರ್ಜಿ retweet ಮಾಡಿದ್ದಾರೆ.

 

ಅನು ಪ್ರಭಾಕರ್ ಅವರು ಅಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನು ಹಾಗೂ ರಘು ಮುಖರ್ಜಿ ಅವರ ಮಗುವಿಗೆ ಐದು ತಿಂಗಳಾಗಿದ್ದು ಮಗಳ ಜೊತೆ ಕಾಲಕಳೆಯುತ್ತಿದ್ದಾರೆ. 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಎರಡನೇ ಮದುವೆಯಾಗಿದ್ದು, ಇದೀಗ ಈ ತಾರಾ ಜೋಡಿ ಮೊದಲ ಮಗುವನ್ನು ಪಡೆದ ಖುಷಿಯಲ್ಲಿದೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top