fbpx
ಭವಿಷ್ಯ

ಪುರಾಣ ಗ್ರಂಥಗಳ ಪ್ರಕಾರ ಕಲಶವನ್ನು ಯಾಕೆ ಶುಭ ಹಾಗೂ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತೆ ಗೊತ್ತಾ

ಕಲಶವನ್ನು ಯಾಕೆ ಶುಭ ಎಂದು ಪರಿಗಣಿಸಲಾಗಿದೆ ಎಂದು ನಿಮಗೆ ಗೊತ್ತಾ ?
ಕಲಶವನ್ನು ಮಂಗಳ ಸೂಚಕ ಮತ್ತು ಶುಭ ಎಂದು ಪರಿಗಣಿಸಲಾಗಿದೆ. ಯಾಕೆ ? ಇದರ ಹಿಂದಿರುವ ಕಾರಣವೇನು ? ಪುರಾಣ ಗ್ರಂಥಗಳ ಪ್ರಕಾರ ಆ ಕಲಶದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಸೃಷ್ಟಿಯ 3 ಸರ್ವಶ್ರೇಷ್ಠ ಶಕ್ತಿಗಳು ಮತ್ತು ಮಾತೆಯರು ಕೂಡ ನೆಲೆಗೊಂಡಿರುತ್ತಾರೆ.

 

 

 

ಸೀತಾದೇವಿಯ ಜನನದ ವಿಷಯದಲ್ಲಿ ಕೂಡ ಕಲಶ ಪವಿತ್ರ ಎಂದು ಸಾಬೀತಾಗಿದೆ. ರಾಜ ಜನಕನ ರಾಜ್ಯದಲ್ಲಿ ಒಂದು ಬಾರಿ ಭೂಮಿಯೆಲ್ಲವೂ ಒಣಗಿಹೋಗಿತ್ತು. ಆಗ ದೇವರ್ಷಿ ನಾರದರು ಅವರಿಗೆ ಭೂಮಿಯನ್ನು ಉಳುಮೆ ಮಾಡಲು ಹೇಳಿದರು, ಉಳುಮೆ ಮಾಡುವಾಗ ಅವರಿಗೆ ಒಂದು ಜೋರಾದ ಧ್ವನಿ ಕೇಳಿಸಿತು. ಅದೇನು ಎಂದು ತೆಗೆದು ನೋಡುವಾಗ ಅಲ್ಲಿ ಒಂದು ಗಡಿಗೆ ಇತ್ತು. ಆ ಗಡಿಗೆಯನ್ನು ಹೊರಗೆ ತೆಗೆದು ನೋಡಿದರೆ ಅದರೊಳಗೆ ಒಂದು ಹೆಣ್ಣು ಮಗು ಅಳುತ್ತಿರುವ ಧ್ವನಿ ಕೇಳಿಸುತ್ತದೆ.ಆ ಮಗುವೇ ಮುಂದೆ ಸೀತೆಯಾಗಿ ಬೆಳದಿದ್ದು. ಸಮುದ್ರ ಮಂಥನದ ಸಮಯದಲ್ಲಿ ಅಮೃತ ಕಲಶದಲ್ಲಿಯೇ ಸಿಕ್ಕಿತ್ತು. ಪ್ರಾಚೀನ ಫೋಟೋಗಳಲ್ಲಿ ನೀವು ಕಾಣಬಹುದು ಮಹಾಲಕ್ಷ್ಮಿಯ ಜೊತೆಗೆ ಅಕ್ಕಪಕ್ಕದಲ್ಲಿ ಎರಡು ಆನೆಗಳು ನಿಂತಿರುತ್ತವೆ. ಕಲಶದಲ್ಲಿರುವ ಜಲದಿಂದ ಆನೆಗಳು ಲಕ್ಷ್ಮೀ ದೇವಿಗೆ ನೀರಿನಿಂದ ಸ್ನಾನ ಮಾಡಿಸುವುದನ್ನು ಕಾಣಬಹುದು. ಆದ್ದರಿಂದಲೇ ಕಲಶವನ್ನು ಪುಣ್ಯ ರೂಪದಲ್ಲಿ ಪವಿತ್ರ ಎಂದು ಪರಿಗಣಿಸಲಾಗಿದೆ.

ದೇವಿಯ ಪೂಜೆಗೆ ಕಲಶವನ್ನು ಸ್ಥಾಪನೆ ಮಾಡಲಾಗುತ್ತದೆ. ಕಲಶ ರೂಪದಲ್ಲಿ ಸ್ವಯಂ ದೇವಿಯೇ ಮೂರ್ತಿಯಾಗಿ ವಿರಾಜಮಾನಳಾಗಿದ್ದಾಳೆ ಮತ್ತು ಯಾವುದೇ ಶುಭ ಕಾರ್ಯದಲ್ಲಿ ಆದರೂ ಕೂಡ ಗೃಹಪ್ರವೇಶ, ಗೃಹ ನಿರ್ಮಾಣ , ವಿವಾಹ ಪೂಜೆಗಳಲ್ಲಿ ಕಲಶವನ್ನು ಸ್ಥಾಪನೆ ಮಾಡಲಾಗುತ್ತದೆ. ಕಲಶದಲ್ಲಿ ಕೆಂಪುವಸ್ತ್ರ, ತೆಂಗಿನಕಾಯಿ ಮಾವಿನ ಮರದ ಎಲೆಗಳು ಮತ್ತು ವೀಳ್ಯದೆಲೆಯಿಂದ ಅಲಂಕೃತ ಗೊಳಿಸಲಾಗುತ್ತದೆ ಮತ್ತು ಇಲ್ಲಿ ಸಗಣಿಯನ್ನು ಕೂಡ ಬಳಸಲಾಗುತ್ತದೆ. ಯಾಕೆಂದರೆ ಹಸುವಿನ ಸಗಣಿಯಲ್ಲಿ ಕ್ಷಯ ರೋಗವನ್ನು ನಾಶಪಡಿಸುವ ಕೀಟನಾಶಕವನ್ನು ಹೊಂದಿರುತ್ತದೆ. ಆದ್ದರಿಂದ ಇದು ವೈಜ್ಞಾನಿಕ ರೀತಿಯಲ್ಲೂ ಕೂಡ ದೃಢಪಟ್ಟಿದೆ. ಇವೆಲ್ಲ ಕಾರಣದಿಂದ ಆ ಕಲಶವನ್ನು ಮಂಗಳ ಸೂಚಕ ಎಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಯಾವುದೇ ಪೂಜಾ, ಅನುಷ್ಠಾನ, ಹೋಮ, ಯಜ್ಞ, ಯಾಗ ಶುಭ ಕಾರ್ಯಗಳಲ್ಲೂ ಕೂಡ ಕಲಶವನ್ನು ಸ್ಥಾಪಿಸಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top