fbpx
ಸಮಾಚಾರ

ಕ್ರೇಜಿಸ್ಟಾರ್ ಅಭಿಮಾನಿಗಳೊಂದಿಗೆ ದರ್ಶನ್ ಸಂಭ್ರಮ – ಗುಡ್ ನ್ಯೂಸ್ ನೀಡಿದ ದಚ್ಚು

ಸ್ಟಾರ್ ಕಲಾವಿದರು ಸಿನಿಮಾಗಳ ಟ್ರೈಲರ್ ಗಳಿಗೆ ಧ್ವನಿ ನೀಡುವುದು ಅಥವಾ ಸಿನಿಮಾಗಳಿಗೆ ಹಾಡುವುದು ಇತ್ತೀಚಿಗೆ ಒಂದು ಟ್ರೆಂಡ್ ನಂತಾಗಿದೆ .ಇನ್ನೂ ಸ್ಯಾಂಡಲ್ವುಡ್ ನಲ್ಲಿಯೂ ಇದೆ ಟ್ರೆಂಡ್ ಭರ್ಜರಿಯಾಗಿ
ನಡೆಯುತ್ತಿದ್ದು. ಈ ಟ್ರೆಂಡ್ ನಲ್ಲಿ ಹಿರಿಯ ನಟ ಅನಂತ್ ನಾಗ್ ,ಪುನೀತ್ ರಾಜಕುಮಾರ್, ಶಿವಣ್ಣ, ಮತ್ತು ಸುದೀಪ್ ಮುಂಚೂಣಿಯಲ್ಲಿದ್ದಾರೆ.

ಹೀಗಿರುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏಕೆ ಯಾವ ಸಿನಿಮಾಗಳಲ್ಲಿಯೂ ಹಾಡಿಲ್ಲ ಅಥವಾ ಯಾವ ಟ್ರೈಲರ್ ಗಳಿಗೂ ಹಿನ್ನೆಲೆ ಧ್ವನಿ ಕೊಟ್ಟಿಲ್ಲ ಅನ್ನೋ ಪ್ರಶ್ನೆ ಅವರ ಆಪಾರ ಅಭಿಮಾನಿಗಳನ್ನು ಕಾಡಿದ್ದು, ಒಂದರ್ಥದಲ್ಲಿ ದಾಸನ ಅಭಿಮಾನಿಗಳು ತಮ್ಮ ಅಚ್ಚು ಮೆಚ್ಚಿನ ನಟ ಯಾವಾಗ ಹಾಡುವರೆಂದು ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಇದೀಗ ಇದರ ಹಿನ್ನೆಲೆಯಲ್ಲೇ ದರ್ಶನ್ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದು ಬಂದಿದ್ದು..ನೀವು ದರ್ಶನ್ ಅಭಿಮಾನಿಗಳಾಗಿದ್ದರೆ ಈ ವಿಷಯವನ್ನು ಕೇಳಿ ದಿಲ್ ಕುಶ್ ಆಗ್ತೀರಾ!!!

ಹೌದು, ಅಭಿಮಾನಿಗಳು ನಿರೀಕ್ಷಿಸಿದಂತೆ ದಚ್ಚು ಇದೀಗ ಒಂದು ಸಿನಿಮಾಗೆ ಹಾಡು ಹಾಡುತ್ತಿದ್ದಾರೆ. ಅಂದಹಾಗೆ ಅದು ಯಾವ ಸಿನಿಮಾ? ಏನು-ಎತ್ತ ? ಅಂತ ತಲೆಕೆಡಿಸ್ಕೊಬೇಡಿ ಮುಂದೆ ಓದಿ

ಎಂ.ಎಸ್​. ರಮೇಶ್​​ ನಿರ್ದೇಶನ ಮಾಡುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ದಶರಥ’ ಚಿತ್ರದಲ್ಲಿ ಬರುವ ಟೈಟಲ್​​ ಸಾಂಗ್​ಗೆ ದರ್ಶನ್​ ಧ್ವನಿ ನೀಡಲಿದ್ದಾರೆ. ಹೌದು, ದರ್ಶನ್ ಈ ಟೈಟಲ್ ಸಾಂಗ್ ಅನ್ನು ಹಾಡಿದರೆ ಅದ್ಭುತವಾಗಿರುತ್ತದೆ ಎಂದು ಯೋಚಿಸಿದ ಚಿತ್ರತಂಡ ಈ ಮನವಿಯನ್ನು ದರ್ಶನ್​ ಬಳಿಯೂ ಇಟ್ಟಿದ್ದರು. ಈ ಮನವಿಗೆ ಪ್ರತಿಕ್ರಿಯಿಸದ ದಚ್ಚು ಓಕೆ ಎಂದಿದ್ದಾರೆ. ಆದರೆ ವಿಷಯ ಏನಪ್ಪಾ ಅಂದರೆ, ದರ್ಶನ್​ ಈವರೆಗೆ ಯಾವುದೇ ಸಾಂಗ್​ ನ್ನು ಹಾಡದೆ ಇರುವುದರಿಂದ ಈ ಸಿನಿಮಾದಲ್ಲಿ ಹಾಡುವ ಬದಲಿಗೆ ಹಾಡಿನ ಸಾಹಿತ್ಯವನ್ನು ತಮ್ಮದೇ ಶೈಲಿಯಲ್ಲಿ ಓದಿದ್ದಾರೆ​. ಒಟ್ಟಿನಲ್ಲಿ ದರ್ಶನ್ ಸಾಹಿತ್ಯ ಓದಿರುವ ವೈಖರಿ ಚಿತ್ರತಂಡಕ್ಕೂ ಇಷ್ಟವಾಗಿದೆ. ಹಾಗಾಗಿ ದರ್ಶನ್​ ಓದಿರುವ ಸಾಲುಗಳಿಗೆ ಸಂಗೀತ ಸಂಯೋಜನೆ ಮಾಡಿ, ಅದನ್ನು ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ನಿರ್ದೇಶಕರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top