fbpx
ಸಮಾಚಾರ

ಹಾರ್ದಿಕ್-ರಾಹುಲ್ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ಕರಣ್ ಜೋಹರ್- ಹೇಳಿದ್ದೇನು ಗೊತ್ತಾ?

ಖಾಸಗಿ ಟಿವಿ ಕಾರ್ಯಕ್ರಮ ಕಾಫಿ ವಿತ್ ಕರಣ್ ಶೋದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ನಿಷೇಧಕ್ಕೊಳಗಾಗಿದ್ದಾರೆ. ಪ್ರಸ್ತುತ ಕಾರ್ಯಕ್ರಮ ನಡೆಸಿಕೊಟ್ಟಿರುವ ಟಿವಿ ನಿರೂಪಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.

ಈ ದುರದೃಷ್ಟಕರ ಘಟನಗೆ ನಾನೂ ಜವಾಬ್ದಾರನಾಗಿರುತ್ತೇನೆ ಎಂದು ಹೇಳಬಯಸುತ್ತೇನೆ. ಯಾಕೆಂದರೆ ಇದು ನನ್ನ ಶೋ, ಇದು ನನ್ನ ಫ್ಲ್ಯಾಟ್‌ಫಾರ್ಮ್. ಅವರನ್ನು ನಾನು ಅತಿಥಿಗಳಾಗಿ ಆಹ್ವಾನಿಸಿದ್ದೆ. ಹಾಗಾಗಿ ಕಾರ್ಯಕ್ರಮದ ಆಯೋಜನೆಯ ಸಂಪೂರ್ಣ ಜವಾಬ್ದಾರಿ ನನ್ನದಾಗಿದೆ. ಈ ಎಲ್ಲ ಘಟನೆಗಳ ಬಳಿಕ ಅನೇಕ ರಾತ್ರಿಗಳಲ್ಲಿ ನಿದ್ದೆಯೇ ಬರಲಿಲ್ಲ. ಈ ಕಳಂಕವನ್ನು ಹೇಗೆ ಮರೆಮಾಚಬಹುದು ಎಂಬುದರ ಬಗ್ಗೆ ಚಿಂತೆ ಕಾಡುತ್ತಿತ್ತು. ನನ್ನ ಮಾತನ್ನು ಯಾರು ಆಲಿಸುತ್ತಾರೆ? ಇವೆಲ್ಲವೂ ನನ್ನ ನಿಯಂತ್ರಣದಲ್ಲಿರಲಿಲ್ಲ ಎಂದು ಕರಣ್ ಜೋಹರ್ ಹೇಳಿದ್ದಾರೆ.

 

ನಾನು ಪಾಂಡ್ಯ ಹಾಗೂ ರಾಹುಲ್​ಗೆ ಕೇಳಿದ ಪ್ರಶ್ನೆಯನ್ನು ನನ್ನ ಶೋಗೆ ಬರುವ ಪ್ರತಿಯೊಬ್ಬರಿಗೆ ಕೇಳುತ್ತೇನೆ. ಅವರಿಂದ ಉತ್ತರವನ್ನು ನಾನೇ ಹೇಳಿಸಲು ಸಾಧ್ಯವಿಲ್ಲ. ಅದು ನನ್ನ ನಿಯಂತ್ರಣದಲ್ಲೂ ಇಲ್ಲ. ದೀಪಿಕಾ ಪಡುಕೋಣೆ, ಆಲಿಯಾ ಭಟ್​ಗೆ ಇದೇ ಮಾದರಿಯ ಪ್ರಶ್ನೆ ಕೇಳಿದ್ದೆ” ಎಂದು ಸ್ಪಷ್ಟನೆ ನೀಡಿದ್ದಾರೆ ಕರಣ್​.

ಏನಿದು ವಿವಾದ?
ಕರಣ್ ಜೋಹರ್ ನಡೆಸಿಕೊಟ್ಟ ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ಪಾಂಡ್ಯ ಹಾಗೂ ರಾಹುಲ್ ಮಹಿಳೆಯರ ಬಗ್ಗೆ ಸ್ತ್ರೀದ್ವೇಷಿ, ಕಾಮಪ್ರಚೋದಕ ಹೇಳಿಕೆಗಳನ್ನು ನೀಡಿದ್ದರು. ಈ ವೇಳೆ ರಾಹುಲ್‌ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಹಾರ್ದಿಕ್‌ ಮುಕ್ತವಾಗಿ ಮಾತುಗಳನ್ನಾಡಿದ್ದರು. ಇದು ವ್ಯಾಪಕ ಟೀಕೆಗೆಗಳಿಗೆ ಗುರಿಯಾಗಿತ್ತು. ಬಳಿಕ ಪಶ್ಚಾತಾಪ ವ್ಯಕ್ತಪಡಿಸಿದ ಪಾಂಡ್ಯ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದರು. ಆದರೂ ಬಿಸಿಸಿಐ ಆಡಳಿತ ಸಮಿತಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top