fbpx
ಭವಿಷ್ಯ

25 ಜನವರಿ- ನಿತ್ಯಭವಿಷ್ಯ ಮತ್ತು ಪಂಚಾಂಗ

ಶುಕ್ರವಾರ, ಜನವರಿ ೨೫, ೨೦೧೯
ಸೂರ್ಯೋದಯ : ೦೭:೧೭
ಸೂರ್ಯಾಸ್ತ : ೧೮:೨೪
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಪುಷ್ಯ

ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ – ೧೮:೧೮ ವರೆಗೆ
ನಕ್ಷತ್ರ : ಉತ್ತರ ಫಾಲ್ಗುಣಿ – ೧೬:೨೬ ವರೆಗೆ
ಯೋಗ : ಅತಿಗಂಡ – ೧೪:೪೮ ವರೆಗೆ

ಅಭಿಜಿತ್ ಮುಹುರ್ತ:೧೨:೨೯ – ೧೩:೧೩
ಅಮೃತಕಾಲ : ೦೯:೪೯ – ೧೧:೧೭

ರಾಹು ಕಾಲ:೧೧:೨೮ – ೧೨:೫೧
ಗುಳಿಕ ಕಾಲ:೦೮:೪೩ – ೧೦:೦೬
ಯಮಗಂಡ:೧೫:೩೬ – ೧೬:೫೮

ನಿಮ್ಮ ಪಾಲಿಗೆ ಅದೃಷ್ಟ ಬರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.

ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆಯು ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.

ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ಕೆಲ ವಿಚಾರಗಳ ಬಗ್ಗೆ ಸಮ್ಮತಿ ಸೂಚಿಸಿ. ಆಗ ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೊಸತನ ಮೂಡಿಬರುವುದು.

ನಿಮ್ಮ ವೈರಿಗಳ ಬಗ್ಗೆ ಎಚ್ಚರಿಕೆ ಇರಲಿ. ಈ ಬಗ್ಗೆ ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಿಂದಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷ ಕನಾದ ಶ್ರೀಲಕ್ಷ್ಮೀನಾರಸಿಂಹನನ್ನು ನೆನೆಯಿರಿ.

 

ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದರು ಎನುವಂತಾಗಿದೆ. ಎಲ್ಲಾ ಸೌಲಭ್ಯವೂ ನಿಮ್ಮ ಮನೆ ಬಾಗಿಲಿಗೆ ಬರುತ್ತಿರುವಾಗ ಬರದೆ ಇರುವ ವಸ್ತು ಅಥವಾ ವ್ಯಕ್ತಿಯ ಬಗ್ಗೆ ಚಿಂತಿಸಿ ಕಾಲ ಕಳೆಯುವುದನ್ನು ನಿಲ್ಲಿಸಿ. ಪ್ರಗತಿಗೆ ಅನೇಕ ದಾರಿಗಳಿವೆ.

 

ಸಣ್ಣಪುಟ್ಟ ವಿಷಯಗಳಿಗೆ ದುಃಖಿಸಬೇಡಿ. ಹೊಸ ಕಾರ್ಯಯೋಜನೆಯಿಂದ ಅಗಾಧ ಕಾರ್ಯಸಿದ್ಧಿ ಆಗುವುದು. ಆದರೆ ಬೆಲೆ ಬಾಳುವ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವುದು ಒಳ್ಳೆಯದು.

 

ಸಂಜೆಯ ವೇಳೆಗೆ ಅನೇಕ ಒತ್ತಡಗಳಿಂದ ಹೊರಬರುವಿರಿ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಕೂಡಿಟ್ಟ ಹಣ ಶೀಘ್ರವೇ ಖಾಲಿಯಾಗುವುದು. ಸಾಲ ಮಾಡಿದರೆ ಆಯಿತು ಎಂದರೆ ನಿಮಗೆ ಯಾರೂ ಸಾಲ ನೀಡುವುದಿಲ್ಲ.

 

ಎದೆಗುಂದಬೇಡಿ. ವಿರೋಧಿಗಳ ನಡುವೆಯೇ ಹೆಜ್ಜೆ ಹಾಕಿ. ನಿಮ್ಮ ಅಸಲಿ ಪ್ರತಿಭೆ ನಿಮ್ಮನ್ನು ರಕ್ಷಿಸಲಿದೆ. ನೂತನ ಜವಾಬ್ದಾರಿಯನ್ನು ಅಷ್ಟೇ ಶ್ರದ್ಧೆಯಿಂದ ನಿರ್ವಹಿಸುವಿರಿ. ಇದು ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗುವುದು.

 

ನೀವು ಬಸವಳಿಯುವ ವ್ಯಕ್ತಿಯಲ್ಲ. ನಿಮ್ಮ ಗುಣವೇ ಅಂತಹದು. ಈ ಗುಣದಿಂದಲೇ ನೀವು ಮಹತ್ತರವಾದ ಕಾರ್ಯ ಮಾಡಿ ಮುಗಿಸುವಿರಿ. ಇದರಿಂದ ವಿರೋಧಿಗಳು ಕೂಡಾ ನಿಮ್ಮ ಬಗ್ಗೆ ಹೆಮ್ಮೆ ಪಡುವರು.

ಸ್ನೇಹಿತರೊಡನೆ ನಗುವಿನ ಅಲೆಯು ನವಿರಾಗಿರಲಿ. ಗೆಳೆಯರೊಬ್ಬರಿಂದ ಚೈತನ್ಯಕಾರಿ ಬೆಂಬಲ ದೊರೆಯುವುದು. ಆದಾಗ್ಯೂ ಯಾವುದೋ ಕೌಟುಂಬಿಕ ವಿಷಯವು ನಿಮ್ಮ ತಲೆನೋವಿಗೆ ಕಾರಣವಾಗುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

 

 

ವಿವಿಧ ಒತ್ತಡಗಳಿಂದ ಜರ್ಜರಿತರಾಗಿರುತ್ತೀರಿ. ಆದರೆ ಅನಿರೀಕ್ಷಿತ ಬೆಳವಣಿಗೆಯು ನಿಮ್ಮ ಒತ್ತಡಗಳನ್ನು ಕಡಿಮೆ ಮಾಡುವುದು. ಮಾತು ಆಡುವಾಗ ಎರಡು ಬಾರಿ ಯೋಚಿಸಿ ಮಾತನಾಡಿ. ಮಾತು ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವುದು.

ಹೊಸಬರೊಬ್ಬರು ನಿಮ್ಮನ್ನು ಸಂಪರ್ಕಿಸಿ, ನಿಮಗೆ ಬೇಕಾದ ಉಪಯುಕ್ತ ಸಲಹೆಗಳನ್ನು ಕೊಡುವರು. ಅದರಿಂದ ನಿಮ್ಮ ಕಾರ್ಯಗಳು ಸುಲಲಿತವಾಗುವವು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top