fbpx
ಸಮಾಚಾರ

ರೈತರಿಗೆ ಭರ್ಜರಿ ಗಿಫ್ಟ್ ನೀಡಲಿದೆ ಮೋದಿ ಸರ್ಕಾರ !

ಲೋಕಸಭಾ ಚುನಾವಣೆಗೆ ಸಮೀಪಿಸುತ್ತಿದ್ದು. ಎಲ್ಲಾ ಪಕ್ಷಗಳು ಚುನಾವಣೆಗಾಗಿ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಎಲ್ಲ ಪಕ್ಷಗಳು ಹಪಿಹಪಿಸುತ್ತಿವೆ ಅದಕ್ಕಾಗಿ ಒಂದಷ್ಟು ಆಶ್ವಾಸನೆಗಳನ್ನು ಸಹ ನೀಡುತ್ತಿವೆ.

ಇದೀಗ ಇದರ ಬೆನ್ನಲ್ಲೇ ಮೋದಿ ಸರಕಾರ ರೈತರಿಗಾಗಿ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು, ಕೇಂದ್ರ ಸರ್ಕಾರ ರೈತರಿಗೆ ಒಂದು ಬೊಂಬಾಟ್ ನ್ಯೂಸ್ ಕೊಟ್ಟಿದೆ. ಅಂದಹಾಗೆ ಅದೇನು ನ್ಯೂಸ್ ಅಂತೀರಾ ಮುಂದೆ ಓದಿ…… !

 

 

ಹೌದು, ರೈತರ ಆದಾಯ ವೃದ್ಧಿ, ಹಾಗೂ ಕೃಷಿ ಕ್ಷೇತ್ರದ ಪ್ರಗತಿಯನ್ನು ಗಮನದಲ್ಲಿಟ್ಟು ಕೊಂಡಿರುವ ಮೋದಿ ಸರ್ಕಾರ ರೈತರಿಗಾಗಿ ಹೊಸ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ. ಇಂದು ಶಾಸಕಾಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಆದಾಯ ಕೊರತೆಯ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೇ ಕೃಷಿ ಸಚಿವಾಲಯವು ದೀರ್ಘ ಹಾಗೂ ಕಡಿಮೆ ಅವಧಿಯ ಕೃಷಿ ಸಮಸ್ಯೆಗಳ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ಶಾಸಕಾಂಗ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗೂ ಮುಖ್ಯವಾಗಿ ಕೃಷಿ ಸಾಲವನ್ನು ಸೂಕ್ತ ಸಂದರ್ಭದಲ್ಲಿಯೇ ಮರುಪಾವತಿ ಮಾಡುತ್ತಿರುವ ರೈತರ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಇಂದಿನ ಶಾಸಕಾಂಗ ಸಭೆ ಮುಗಿದ ಬಳಿಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ತಿಳಿದು ಬರಲಿದೆ. ಆದರೆ ಈಗಾಗಲೇ ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್ ಸಿಂಗ್ ಅವರು 2019 – 20ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರ ಕೃಷಿ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂದು ಹೇಳಿರುವುದು ಗಮನಾರ್ಹವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top