fbpx
ಸಮಾಚಾರ

“ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ದಿನೇಶ್ ಗುಂಡೂರಾವ್ ಸಾಧನೆ” ಅನಂತ್ ಕುಮಾರ್ ಹೆಗಡೆ.

ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಗೆ ಗ್ರಾಸವಾಗುವವರು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ. ಯಾವುದೇ ವಿಚಾರವಾಗಲೇ ನಿರ್ಭಿಡತೆಯಿಂದ ನೇರಾನೇರಾವಾಗಿ ಹೇಳಿಕೆ ಕೊಡುತ್ತಾ ಒಂದು ವರ್ಗದ ಜನರ ತೀವ್ರ ವಿರೋಧವನ್ನೂ ಕಟ್ಟಿಕೊಂಡಿರುವ ಅನಂತಕುಮಾರ್ ಹೆಗ್ಡೆಯವರು ಆ ಮೂಲಕವೇ ಸುದ್ದಿಯಾಗಿದ್ದು ಹೆಚ್ಚು.. ಇಂಥ ಹೆಗಡೆಯವರು ಇದೀಗ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ.

ಭಾನುವಾರ ಕೇಂದ್ರ ಸಚಿವರಾದ ಅನಂತಕುಮಾರ್ ಹೆಗ್ಡೆ ತಮ್ಮ ಭಾಷಣದಲ್ಲಿ ಹಿಂದೂ ಹುಡುಗಿ ಮುಟ್ಟುವ ಯುವಕನ ಕೈ ಇರಬಾರದು ಎಂಬ ಹೇಳಿಕೆಯನ್ನು ನೀಡಿದ್ದರು. ಈ ಸಂಬಂಧ ದಿನೇಶ್ ಗುಂಡೂರಾವ್, ಕೇಂದ್ರ ಸಚಿವರಾಗಿ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನೀವು ನೀಡಿದ ಕೊಡುಗೆ ಏನು? ನಿಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ನೋಡಿದ್ರೆ ನನಗೆ ನೋವಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

 

 

ಇದಕ್ಕೆ ಪ್ರತಿಕ್ರಿಯಿಸಿರುವ ಹೆಗಡೆ, “ಈ ವ್ಯಕ್ತಿ(ದಿನೇಶ್ ಗುಂಡೂರಾವ್) ಕೇಳಿದ ಪ್ರಶ್ನೆಗೆ ನಾನು ಉತ್ತರಿಸುತ್ತಿದ್ದೇನೆ. ನಿಮ್ಮ ಸಾಧನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿ. ನೀವು ಓರ್ವ ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದ ವ್ಯಕ್ತಿ ಎಂಬುದಷ್ಟೇ ನನಗೆ ಗೊತ್ತು,” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top