fbpx
ಸಮಾಚಾರ

ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿಯ ಈ ಜೋಡಿಗಳು !

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದ ಗೋವಿಂದೇಗೌಡ (ಜಿಜಿ) ಮತ್ತು ದಿವ್ಯಶ್ರೀ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಸ್ಪರ್ಧಿಗಳ ನಡುವೆ ಈಗ ಪ್ರೀತಿ ಮೂಡಿದ್ದು .ಒಟ್ಟಿಗೆ ವೇದಿಕೆ ಏರುತ್ತಿದ್ದ ಗೋವಿಂದೆ ಗೌಡ ಹಾಗೂ ದಿವ್ಯ ಜೋಡಿ ಇದೀಗ ಒಟ್ಟಿಗೆ ಹಸೆಮಣಿ ಏರುತ್ತಿದ್ದಾರೆ.

 

 

ಇದೇ ಜನವರಿ 27ಕ್ಕೆ ಅಂದರೆ ಭಾನುವಾರ ಬೆಂಗಳೂರಿನಲ್ಲಿ ದಿವ್ಯಾಶ್ರೀ ಹಾಗೂ ಗೋವಿಂದೇ ಗೌಡ ನಿಶ್ಚಿತಾರ್ಥ ಜರುಗಿದ್ದು . ಈ ಜೋಡಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ತಮ್ಮ ಮದುವೆಯನ್ನು ಮುಂದೂಡಿದ್ದಾರೆ ಅಂದಹಾಗೆ ಈ ಜೋಡಿಗಳ ವಿವಾಹ ಮಾರ್ಚ್‌ 14 ರಂದು ಶೃಂಗೇರಿಯಲ್ಲಿ ನಡೆಯಲಿದೆ.  ಶೋನಲ್ಲಿಯೇ ಒಬ್ಬರನ್ನೊಬ್ಬರು ಇಷ್ಟ ಪಟ್ಟ ಈ ಜೋಡಿ ಕುಟುಂಬದ ಒಪ್ಪಿಗೆಯೊಂದಿಗೆ ನವಜೀವನ ಆರಂಭಿಸಲಿದೆ.

 

 

ಎರಡೂ ಕುಟುಂಬಗಳ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ದಿವ್ಯಾಶ್ರೀ ಹಾಗೂ ಗೋವಿಂದೇ ಗೌಡರ ಮನೆಯಲ್ಲಿ ಮದುವೆ ಸಂಬಂಧ ಹುಡುಕುತ್ತಿದ್ದರು. ಇದೆ ವೇಳೆ ದಿವ್ಯಾ ತಂದೆ ತುಂಬಾ ಅನ್ಯೋನ್ಯವಾಗಿರುವ ಈ ಇಬ್ಬರಿಗೂ ಮದುವೆ ಮಾಡೋಣ ಅಂತ ನಿರ್ಧರಿಸಿ, ಕಳೆದ ಸೆಪ್ಟೆಂಬರ್​ನಲ್ಲಿ ಮಾತು-ಕತೆ ನಡೆಸಿದ್ದರು. ಒಟ್ಟಿನಲ್ಲಿ ಇನ್ನೇನು ಕೇಳೆ ತಿಂಗಳುಗಳಲ್ಲಿ ಈ ಜೋಡಿ ಮದುವೆ ಎಂಬ ಸಿಹಿ ಸಂಕೋಲೆಯಲ್ಲಿ ಬಂಧಿಗಳಾಗಲಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top