fbpx
ಭವಿಷ್ಯ

29 ಜನವರಿ- ನಿತ್ಯಭವಿಷ್ಯ ಮತ್ತು ಪಂಚಾಂಗ.

ಮಂಗಳವಾರ, ಜನವರಿ ೨೯, ೨೦೧೯
ಸೂರ್ಯೋದಯ : ೦೭:೧೬
ಸೂರ್ಯಾಸ್ತ : ೧೮:೨೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಪುಷ್ಯ

ಪಕ್ಷ : ಕೃಷ್ಣ ಪಕ್ಷ
ತಿಥಿ : ನವಮೀ – ೧೪:೪೧ ವರೆಗೆ
ನಕ್ಷತ್ರ : ವಿಶಾಖ – ೧೫:೧೫ ವರೆಗೆ
ಯೋಗ : ವೃದ್ಧಿ – ೨೯:೪೮ ವರೆಗೆ

ಅಭಿಜಿತ್ ಮುಹುರ್ತ:೧೨:೨೯ – ೧೩:೧೪
ಅಮೃತಕಾಲ : ೨೯:೪೦ – ೩೧:೨೧

ರಾಹು ಕಾಲ: ೧೫:೩೭ – ೧೭:೦೦
ಗುಳಿಕ ಕಾಲ: ೧೨:೫೨ – ೧೪:೧೪
ಯಮಗಂಡ: ೧೦:೦೬ – ೧೧:೨೯

 

ನಿಮಗೆ ನಿಮ್ಮ ದುಡುಕುತನವೇ ಸಹಕಾರಿಯಾಗಲಿದೆ. ಮಹತ್ವದ ಕಾರ್ಯಕ್ಕೆ ದುಡುಕಿನ ಹೆಜ್ಜೆಯೇ ಸಾಧನೆಯ ದಾರಿ ತೋರಲಿದೆ.ಇದರಿಂದ ನಿಮ್ಮನ್ನು ಕಂಡರೆ ಆಗದವರ ಪ್ರಾಬಲ್ಯ ಕುಸಿಯಲಿದೆ.

 

ನಿಮಗೆ ನಿಮ್ಮಲ್ಲಿನ ಅತಿಯಾದ ಆತ್ಮವಿಶ್ವಾಸ ಕೆಲಸ ಕಾರ್ಯಗಳಿಗೆ ಸಹಾಯ ಮಾಡಲಿದೆ. ಪರಿಣಾಮಕಾರಿ ನಿರ್ಧಾರಗಳಿಂದ ಜಯ ಸಿಗಲಿದೆ. ನಿಮ್ಮ ನಿಸ್ವಾರ್ಥನೆ ನಿಮ್ಮನ್ನು ರಕ್ಷಿಸಲಿದೆ.

 

ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರೊಡನೆ ಸಮಲೋಚನೆ ನಡೆಸುವಿರಿ. ಅದರಿಂದ ನಿಮ್ಮ ಮೇಲಿನ ಗೌರವ ವೃದ್ಧಿಸಲಿದೆ. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅಧಿಕ ಸುಖಕ್ಕೆ ದೇವಿ ಆರಾಧನೆ ಉತ್ತಮ.

 

ನೀವು ಆರ್ಥಿಕ ವಿಚಾರದಲ್ಲಿ ಕಟ್ಟು ನಿಟ್ಟಾಗಿ ವರ್ತಿಸುವುದು ಒಳ್ಳೆಯದು. ಅನವಶ್ಯಕ ಅಪವಾದಗಳು ನಿಮ್ಮನ್ನು ಕಾಡಲಿದ್ದು, ಮೌನದಿಂದ ವರ್ತಿಸಿರಿ. ಹಳೆ ಸಾಲಕ್ಕೆ ಮುಕ್ತಿ ಕಾಣಲಿದ್ದು,ಬಂಧು-ಮಿತ್ರರ ಸಹಕಾರ ದೊರೆಯಲಿದೆ.

 

 

ಹಿತ ಶತ್ರುಗಳ ಸಮಯ ಸಾಧಕತನದಿಂದ ತೊಂದರೆಯಿದ್ದು ಎಚ್ಚರಿಕೆಯಿರಲಿ.ಸಜ್ಜನರ ಸಂಗದಿಂದ ಪ್ರತಿಷ್ಠೆ ಬೆಳೆಯಲಿದೆ

 

 

ಸಾಂಸಾರಿಕ ಸಮಸ್ಯೆಗಳಿದ್ದಲ್ಲಿ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವುದು ಒಳಿತು. ಸಾಮಾಜಿಕ ಭಿನ್ನಾಭಿಪ್ರಾಯಗಳು ನಿಮ್ಮನ್ನು ಕಾಡಲಿದ್ದು, ದುರ್ಗಾದೇವಿ ಸೇವೆಯಿಂದ ಪರಿಹಾರ ಸಾಧ್ಯ.

 

 

ದುಡುಕಿನ ನಿರ್ಧಾರ ಕಾರ್ಯ ಭಂಗಕ್ಕೆ ಕಾರಣವಾಗಲಿದ್ದು, ಎಚ್ಚರಿಕೆ ವಹಿಸುವುದು ಒಳಿತು.ನಿಮಗೆ ದೈವಬಲ ಕೂಡಿಬಂದಿದ್ದು, ಎಲ್ಲ ರೀತಿಯ ಮುನ್ನಡೆಗೆ ಅನುಕೂಲವಿದೆ.

 

 

ಛಲ ಹಾಗೂ ಹಠದಿಂದ ಎಲ್ಲವನ್ನು ಸಾಧಿಸಲೇಬೇಕು ಎಂಬ ಧೈರ್ಯದಿಂದ ಮುನ್ನುಗಿದರೆ ನಿಮ್ಮ ಕಾರ್ಯ ಸಿದ್ಧಿಸಲಿದೆ. ಮಿತ್ರರಲ್ಲಿ ವಿಶ್ವಾಸ ವೃದ್ಧಿಸಲಿದೆ.

 

ಕೆಲವೊಂದು ಸಮಸ್ಯೆಗಳು ನಿಮ್ಮನ್ನು ಕಾಡಲಿದ್ದು, ಎದುರಿಸುವ ಧೈರ್ಯ ಹೊಂದಬೇಕು. ಅಧಿಕ ತಿರುಗಾಟದಿಂದ ಕಾರ್ಯದಲ್ಲಿ ವಿಳಂಬತೆ ಎನಿಸುವುದು.

 

 

ಭಿನ್ನಾಭಿಪ್ರಾಯಗಳು ಕಾಡಬಹುದಾಗಿದ್ದು, ಆರೋಗ್ಯದ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ. ಅನಗತ್ಯ ಖರ್ಚುಗಳ ಬಗ್ಗೆ ಹಿಡಿತ ಇದ್ದರೆ ಒಳಿತು.

 

ಗೊತ್ತು ಗುರಿಯಿಲ್ಲದ ಸುತ್ತಾಟದಿಂದ ಆಯ್ಕೆ ಮಾಡಿಕೊಂಡ ಕಾರ್ಯಗಳು ಅರ್ಧಬಂರ್ಧ ಉಳಿಯುವ ಸಂಭವ. ಹಿತ ಮಿತ್ರರ ಸಲಹೆಯಿಂದ ಕುಟುಂಬದಲ್ಲಿನ ಮನಃಸ್ತಾಪ ತಿಳಿಗೊಳ್ಳಲಿದೆ.

 

ನಿಮ್ಮ ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಗಂಭೀರವಾಗಿ ಪರಿಗಣಿಸುವುದರಿಂದ ಘನತೆ ಹೆಚ್ಚಳಗೊಳ್ಳಲಿದೆ. ನಿಮಗೆ ಒದಗಿ ಬರುವ ಕ್ಲಿಷ್ಟಕರ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top