fbpx
ಸಮಾಚಾರ

‘ರಾಮನ ಹೆಸರಲ್ಲಿ ದೇಶ ಒಡೆಯುವ ಕೆಲಸ ಮಾಡ್ಬೇಡಿ’ ಎಂದು ಗುಡುಗಿದ ಬಾಬಾ ರಾಮ್ ದೇವ್

ಜನವರಿ 29 ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ವಿವಾದದಲ್ಲಿರುವ ಅಯೋಧ್ಯೆಯ ಜಾಗವನ್ನು ಹೊರತುಪಡಿಸಿ ಇನ್ನುಳಿದ ಸ್ಥಳವನ್ನು ರಾಮ ಮಂದಿರ ಪುನರ್ ನಿರ್ಮಿಸಲು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುಂಬೈ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್ ರಾಮ ಮಂದಿರ ನಿರ್ಮಾಣದ ಬಗ್ಗೆ ದನಿ ಎತ್ತಿದ್ದಾರೆ.

ಮಾಧ್ಯಮಗಳ ಎದುರು ಗುಡಿಗಿರುವ ಯೋಗ ಗುರು ಬಾಬಾ ರಾಮ್ ದೇವ್ ” ಯಾವುದೇ ರಾಜಕೀಯ ಪಕ್ಷಕ್ಕೂ ರಾಮ ಸೇರಿಲ್ಲ. ರಾಜಕೀಯಕ್ಕಾಗಿ ರಾಮನನ್ನು ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಾವೆಲ್ಲ ಸನ್ಯಾಸಿಗಳು ಒಗ್ಗೂಡಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಬೇಕು” ಎಂದಿದ್ದಾರೆ.

ಹೌದು, ರಾಮ ಕೇವಲ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ರಾಮ ಇಡೀ ದೇಶಕ್ಕೆ ಸೇರಿದವನು. ಆದ್ದರಿಂದ ಎಲ್ಲಾ ಸಾಧು ಸಂತರು ಕೂಡ ಜೊತೆಗೂಡಿ ರಾಮನ ಮೇಲಿರುವ ಭಕ್ತಿಯನ್ನು ಸಾರಬೇಕು. ದೇಶಕ್ಕೆ ಯಾವುದೇ ತಪ್ಪು ಪರಿಲ್ಪನೆಯನ್ನು ನೀಡುವ ರೀತಿ ನಮ್ಮ ಭಕ್ತಿ ಇರಬಾರದು ಎಂದು ಖಂಡಿಸಿದ್ದಾರೆ.

ಅಷ್ಟೇ ಅಲ್ಲದೆ ಮುಂದುವರೆದು ಮಾತನಾಡಿದ ಬಾಬಾ ರಾಮದೇವ್ ” ಒಂದು ವೇಳೆ ಸಂತರು ಹಾಗೂ ಸನ್ಯಾಸಿಗಳು ಒಗ್ಗೂಡಿ ಪ್ರಾಮಾಣಿಕತೆಯಿಂದ ಇರದಿದ್ದರೆ ದೇಶದಲ್ಲಿ ಏಕತೆ ಹಾಗೂ ಸಮಗ್ರತೆಯನ್ನು ಹೇಗೆ ಕಾಯ್ದುಕೊಳ್ಳಲು ಸಾಧ್ಯ? ರಾಮನ ಹೆಸರನ್ನು ಬಳಸಿಕೊಂಡು ದೇಶವನ್ನು ಒಡೆಯುವ ಕೆಲಸ ಮಾಡಬೇಡಿ.” ಎಂದು ನಾನು ಎಲ್ಲಾ ಸನ್ಯಾಸಿಗಳು ಹಾಗೂ ಸಂತರ ಬಳಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.’

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top