fbpx
ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಿರುತೆರೆಯ ಈ ಜೋಡಿ !

ಇತ್ತೀಚಿಗೆ ಕಿರುತೆರೆಯ ಮೇಲೆ ಒಟ್ಟಾರೆ ನಟಿಸಿದವರು ಮದುವೆಯ ಸಂಕೋಲೆಗೆ ಸಿಲುಕುವ ಸುಂದರ ಪ್ರಕರಣಗಳು ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಇದಕ್ಕೆ ಪೂರಕವಾಗಿ ಇದೀಗ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಮಿ.ಆ್ಯಂಡ್ ಮಿಸಸ್ ರಂಗೇಗೌಡ ಧಾರವಾಹಿ ಖ್ಯಾತಿಯ ರಘು ಹಾಗೂ ಅಮೃತಾ ದಾಂಪತ್ಯ ಜೀವನಕ್ಕೆ ಕಾಲಿಡಲಿಡುತ್ತಿದ್ದಾರೆ.

 

 

ಹೌದು, ಮಿ. ಆ್ಯಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ದಂಪತಿಗಳಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಲಿದ್ದಾರೆ.

ಕುಲವಧು ಧಾರಾವಾಹಿಯಲ್ಲಿ ವಚನಾ ಎಂಬ ಹೆಸರಿನಲ್ಲಿ ಎಲ್ಲರ ಮನೆ ಮಾತಾಗಿರುವ ಅಮೃತಾ ರಾಮೂರ್ತಿರವರು ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದು ಹೀಗಾಗಲೇ ‘H/34 ಪಲ್ಲವಿ ಟಾಕಿಸ್’ ಹಾಗೂ ‘ಸೈಕೋ ಶಂಕ್ರ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಹಾಗೂ ನಟಿ ವಚನ ಅಲಿಯಾಸ್ ಅಮೃತ ‘ನಮ್ಮನೆ ಯುವರಾಣಿ‘ ಧಾರವಾಹಿ ನಟ ಸಾಕೇತ್ ಅಲಿಯಾಸ್ ರಘುವಿಗೆ ನೈಜ ಜೀವನದಲ್ಲಿ ಯುವರಾಣಿಯಾಗುತ್ತಿದ್ದಾರೆ.

ತಾವು ಮದುವೆ ಮಾಡಿಕೊಳ್ಳುತ್ತಿರುವುದರ ಕುರಿತಂತೆ ಮಾತಾಡಿರುವ ರಘು ತಮ್ಮ ಫೇಸ್‌ಬುಕ್ ಪೋಸ್ಟಿನಲ್ಲಿ ‘ಇಟ್ಸ್ ಅಫಿಷಿಯಲ್. ನಿಜ ಜೀವನದಲ್ಲೂ ಮಿ. ಆ್ಯಂಡ್ ಮಿಸಸ್ ರಂಗೇಗೌಡ… ಜೀವನದ ಮೌಲ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ವಂಡರ್‌ಫುಲ್ ಹುಡುಗಿ ನನಗೆ ಸಿಕ್ಕಿದ್ದಾಳೆ. ಥ್ಯಾಂಕ್ಸ್ ನನ್ನ ಜೀವನದಲ್ಲಿ ಬಂದಿದ್ದಕ್ಕೆ. ಇನ್ನು ನಾನೇ ಸ್ಟ್ರಾಂಗೆಸ್ಟ್’ ಎಂದು ಬರೆದು ಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top