ಮನೋರಂಜನೆ

ಅಂಬಿ ಅಭಿಮಾನಿಯ ಈ ಎವರ್ ಗ್ರೀನ್ ಪ್ರೀತಿಗೆ ಮಾರುಹೋದ ಸುಮಲತಾ.

ರೆಬೆಲ್ ಸ್ಟಾರ್ ಅಂಬರೀಷ್ ಭೌತಿಕವಾಗಿ ನಮ್ಮಿಂದ ದೂರವಾಗಿರಬಹುದು, ಆದರೆ ಕನ್ನಡಿಗರ ಮನೆ, ಮನಗಳಲ್ಲಿ ಚಿರಸ್ಥಾಯಿಯಾಗಿ ಅವ್ರು ಉಳಿದಿದ್ದಾರೆ. ಅದರಲ್ಲೂ ಸಕ್ಕರೆ ನಾಡಿನ ಅಚ್ಚು ಮೆಚ್ಚಿನ ಅಣ್ಣನಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅಂಬರೀಶ್ ಅವರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಮೇಲೆ ಪ್ರೀತಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಅಭಿಮಾನಿಯ ಈ ಪ್ರೀತಿಗೆ ಸುಮಲತಾ ಅವರು ಮನಸೋತಿದ್ದಾರೆ.

ತಮ್ಮ ಹೊಲದಲ್ಲಿನ ಭತ್ತದ ನಾಟಿ ಮೇಲೆ ಹೃದಯದ ಆಕಾರ ಮಾಡಿ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ ಎಂದು ಬರೆದಿದ್ದಾರೆ. ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಪಿ.ಹರ್ಷಿತ್‌, ರಾಜು ಕಾಳಪ್ಪ, ಎಂ.ಜೆ.ದಿಲೀಪ್‌ ಕುಮಾರ್‌ ಸಹೋದರರು ತಮ್ಮ ಗದ್ದೆಯಲ್ಲಿ ಭತ್ತದ ಬಿತ್ತನೆ ಬೀಜ ಬಿತ್ತುವ ಮೂಲಕವೇ ಅಂಬರೀಷ್‌ ಮೇಲಿನ ಅಭಿಮಾನ ಮೆರೆದಿದ್ದಾರೆ. ಇವರು ಅಂಬರೀಷ್‌ ಪುಣ್ಯತಿಥಿಯ ದಿನ ಕೇಶಮುಂಡನ ಮಾಡಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದರು.

 

 

ಬೇಸಿಗೆ ಬೆಳೆಗೆ ಕಳೆದ 15 ದಿನಗಳ ಹಿಂದೆ ಗದ್ದೆಯಲ್ಲಿ ಭತ್ತದ ಹೊಟ್ಟಲು ಹಾಕಿದ್ದಾರೆ. ಗದ್ದೆಯ ನಡುವೆ ಹೃದಯಾಕಾರದಲ್ಲಿ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣಾ ಎಂದು ಬರೆದು ಬಿತ್ತನೆ ಬೀಜ ಬಿತ್ತಿದ್ದಾರೆ. ಈಗ ಪೈರು ಮೇಲಕ್ಕೆ ಬೆಳೆದು ಬಂದಿದ್ದು, ಅಂಬರೀಷ್ ಮೇಲಿನ ಅಭಿಮಾನವನ್ನು ಸಾಕ್ಷಿಕರಿಸುತ್ತಿದೆ. ಭತ್ತದ ಪೈರಿನಲ್ಲಿ ಮೂಡಿರುವ ಅಂಬರೀಷ್ ಅಭಿಮಾನದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸುಮಲತಾ ಅಂಬರೀಶ್ ಅವರು ಈ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡು ಅದಕ್ಕೆ, “ಇದು ಎವರ್ ಗ್ರೀನ್ ಪ್ರೀತಿ. ನೆಚ್ಚಿನ ನಟನ ಮೇಲಿರುವ ಪ್ರೀತಿ ತುಂಬಾ ವಿಭಿನ್ನವಾಗಿ ತೋರಿಸಿದ್ದೇನೆ. ಈ ಫೋಟೋ ನೋಡಿ ನಾನು ಮನಸೋತಿದ್ದೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top