ಮನೋರಂಜನೆ

ಆರ್‌ಜಿವಿ ನಿರ್ದೇಶನದ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾಗೆ ಪ್ರಧಾನಿ ಮೋದಿ ಪ್ರಚಾರ.

ವಿವಾದಾತ್ಮಕ ನಿರ್ದೇಶಕ ಎಂದೇ ಹೆಸರಾಗಿರುವ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಲ್ಲಿ ಸದಾ ಕ್ರಿಯಾಶೀಲವಾಗಿರುವ ವ್ಯಕ್ತಿ. ಯಾರನ್ನೋ ಕೆಣಕುವುದು, ಅವರ ಮೇಲೆ ಜೋಕ್‌ ಮಾಡಿಕೊಳ್ಳುವುದು, ಇನ್ನೇನೋ ಕಿತಾಪತಿ ಮಾಡುತ್ತಾ ಸದಾ ಸುದ್ದಿಯಲ್ಲಿರುವ ನಿರ್ದೇಶಕ. ಇದೀಗ ವರ್ಮಾ ಪ್ರಧಾನಿ ಮೋದಿ ಹೆಗಲ ಮೇಲೆ ಬಂದೂಕಿಟ್ಟು ಚಂದ್ರಬಾಬು ನಾಯ್ಡು ವಿರುದ್ಧ ಗುಂಡು ಹಾರಿಸಿದ್ದಾರೆ.

ನಿರ್ದೇಶಕ ಆರ್ ಜಿವಿ ತಮ್ಮ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿಯೇ ಪ್ರಚಾರ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದರು. ಇದೇ ವಿಡಿಯೋವನ್ನು ಆರ್ ಜಿವಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ,ಆದಿ ಟ್ವೀಟ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ನಮ್ಮ ಲಕ್ಷ್ಮೀಸ್ NTR ಚಿತ್ರಕ್ಕೆ ಪ್ರಚಾರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಚಂದ್ರಬಾಬು ನಾಯ್ಡುರನ್ನು ಮೋಸಗಾರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಆರ್ ಜಿವಿ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ಕೂಡ ಇದೆ ವಿಷವನ್ನು ಇಟ್ಟುಕೊಂಡು ತಯಾರಿಸಲಾಗುತ್ತಿದೆ. ಚಂದ್ರಬಾಬು ನಾಯ್ಡು ಅವರ ಮತ್ತೊಂದು ಮುಖ ಆವರಣ ಮಾಡುವುದಾಗಿ, ಅವರು ತಮ್ಮ ಮಾವನಾದ ಮಾಜಿ ಸಿಎಂ ರಾಮರಾವ್ ಅವರಿಗೆ ಮಾಡಿದ ಮೋಸದ ಕುರಿತು ಅಂಶಗಳನ್ನು ರಿವೀಲ್ ಮಾಡುತ್ತೇನೆ ಎಂದು ವರ್ಮಾ ಈಗಾಗಲೇ ಹೇಳಿಕೊಂಡಿದ್ದಾರೆ.. ಇದೀಗ ಮೋದಿ ಅವರ ಭಾಷಣದ ತುಣುಕನ್ನು ಕೂಡ ನಿರ್ದೇಶಕರು ಸಮಯ ಪ್ರಜ್ಞೆ ತೋರಿ ಸಿನಿಮಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top