fbpx
ಸಮಾಚಾರ

ಹುತಾತ್ಮ ಯೋಧರನ್ನು ನೆನೆದು ಗಳಗಳನೆ ಕಣ್ಣೀರಿಟ್ಟ ನಟಿ ಲೀಲಾವತಿ.

ಉಗ್ರರ ದಾಳಿಯಲ್ಲಿ ವೀರ ಯೋಧರ ಹುತಾತ್ಮ ಹಿನ್ನೆಲೆಯಲ್ಲಿ ಯೋಧರನ್ನು ನೆನೆದು ಹಿರಿಯ ನಟಿ ಡಾ.ಲೀಲಾವತಿ ಗಳಗಳನೆ ಕಣ್ಣೀರು ಹಾಕಿದ್ದಾರೆ. ಡಾ. ಲೀಲಾವತಿ ತಮ್ಮ ತೋಟದ ಮನೆಯಲ್ಲಿ ಯೋಧರಿಗೆ ಮೊಂಬತ್ತಿ ಹಚ್ಚಿ ನಮನ ಸಲ್ಲಿಸಿದ್ದು, ವಿಡಿಯೋ ರೆಕಾರ್ಡ್ ಮಾಡಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಿಂದ ಮಾಹಿತಿ ರವಾನೆ ಮಾಡಿದ್ದಾರೆ.

ಯೋಧರ ಮನೆಯವರ ಗೋಳಾಟ ನೋಡಿದರೆ ಏನು ಹೇಳಲು ಸಾಧ್ಯವಾಗುತ್ತಿಲ್ಲ. ಮಂಡ್ಯದ ಗುರು, ಇಡೀ ಜಗತ್ತಿಗೇ ಶ್ರೇಷ್ಠ ಗುರು ಆಗಿಬಿಟ್ರು. ಅವರ ಪಾದಕ್ಕೆ ನನ್ನ ನಮಸ್ಕಾರ. ಅವರ ಹೆಂಡತಿ, ಅಪ್ಪ-ಅಮ್ಮನ ಗೋಳಾಟ ನೋಡಿದ್ರೆ ಏನ್​ ಹೇಳೋಕೆ ಮನಸ್ಸು ಬರುತ್ತೆ? ಎಲ್ಲವೂ ಶೂನ್ಯವಾಗಿ ಕಾಣ್ತಿದೆ. ತ್ಯಾಗ ಮಾಡಿದವರಿಗೆ ದೇವರು ಕೊಡೋ ಶಿಕ್ಷೆ ಇದೇನಾ ಎಂದು ಭಾವುಕರಾಗಿ ಕಣ್ಣಿರಿಟ್ಟರು.

ಯೋಧರು ಹೋಗುವಾಗ ಸರಿಯಾದ ಭದ್ರತೆ ಸಿಕ್ಕಿದಿದ್ದರೆ ಅವರು ಸಾಯುತ್ತಿರಲಿಲ್ಲವೇನೋ, ಯಾರು ಉದಾಸೀನ ಮಾಡಿದ್ದಾರೋ ಗೊತ್ತಿಲ್ಲ. ಆದರೆ ನಾವು ಅವರನ್ನು ಕಳೆದುಕೊಂಡಿದ್ದೇವೆ. ಇವರನ್ನು ಕೊಂದ ಉಗ್ರರಿಗೆ ತಕ್ಕ ಪಾಠ ಕಲಿಸಿ. ಅವರನ್ನು ಸುಮ್ಮನೆ ಬಿಡಬಾರದು ಎಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top