fbpx
ಭವಿಷ್ಯ

ಫೆಬ್ರವರಿ 25- ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ.

ಸ್ಥಳ- ಬೆಂಗಳೂರು.
ಸೋಮವಾರ, 25 ಫೆಬ್ರವರಿ 2019
ಸೂರ್ಯೋದಯ : 6:37 am
ಸೂರ್ಯಾಸ್ತ: 6:27 pm
ಶಕ ಸಂವತ : 1940 ವಿಲಂಬಿ

ಅಮಂತ ತಿಂಗಳು :ಮಾಘ
ಪಕ್ಷ : ಕೃಷ್ಣಪಕ್ಷ
ತಿಥಿ : ಸಪ್ತಮೀ 28:46
ನಕ್ಷತ್ರ : ವಿಶಾಖ 22:08
ಯೋಗ :ಧ್ರುವ 12:00
ಕರಣಂ: ವಿಷ್ಟಿ 16:48 ಬಾವ 28:46

ಅಭಿಜಿತ್ ಮುಹುರ್ತ:12:09 pm – 12:56 pm
ಅಮೃತಕಾಲ :1:18 pm – 2:54 pm

ರಾಹು ಕಾಲ: 8:09 am – 9:37 am
ಗುಳಿಕ ಕಾಲ:2:00 pm – 3:28 pm
ಯಮಗಂಡ:11:04 am – 12:32 pm

 

 

 

ಪದೇ ಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇತರರು ನಿಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು. ಹಾಗಾಗಿ ಆದಷ್ಟು ಸರಿಯಾದ ಮತ್ತು ದೃಢ ನಿರ್ಧಾರ ತಳೆಯುವತ್ತ ಚಿಂತಿಸುವುದು ಒಳ್ಳೆಯದು.

 

ನಿಮ್ಮ ವಿಚಾರದಲ್ಲಿ ಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಇಂದು ಶುಭದಿನವಾಗಿದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು. ನೂತನ ಕೆಲಸ ಮಾಡಲು ಹೊಸ ಉತ್ಸಾಹ ಮೂಡುವುದು.

 

ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಟಿಲ ಸಮಸ್ಯೆಗಳು ಎದುರಾಗುವವು. ಭಗವಂತನ ಮೊರೆ ಹೋಗಿ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯವರ್ತಿಯಾಗಿ ಕಾಗದ ಪತ್ರಗಳಿಗೆ ಸಹಿ ಮಾಡದಿರಿ.

 

ಏನೋ ಆತಂಕ ಎದುರಾಗಲಿದೆ ಎಂದು ವಿಚಲಿತರಾಗುವ ಸಾಧ್ಯತೆ ಇದ್ದು ಎಲ್ಲವೂ ದೈವಕೃಪೆಯಿಂದ ಪರಿಹಾರವಾಗಲಿದೆ ಮತ್ತು ಆತಂಕದಿಂದ ದೂರ ಉಳಿಯುವಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ.

 

 

ನಿಮಗೆ ಸಂಬಂಧಪಡದ ವ್ಯಕ್ತಿಗಳು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಮೂಗು ತೂರಿಸುವುದರಿಂದ ಮುಜುಗರಕ್ಕೆ ಒಳಗಾಗುವಿರಿ. ಅಂತಹ ವ್ಯಕ್ತಿಗಳಿಗೆ ಕಠಿಣ ಪದಗಳನ್ನು ಉಪಯೋಗಿಸಿ ದೂರ ಇರಲು ತಿಳಿಸಿ. ಅನುಕೂಲವಾಗುವುದು.

 

 

ಅನವಶ್ಯಕ ಖರ್ಚುಗಳು ನಿಮ್ಮನ್ನು ಹೈರಾಣ ಮಾಡುವುದು. ಬರಬೇಕಾದ ಹಣ ಸಕಾಲದಲ್ಲಿ ಬರದೆ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗುವುದು. ಮನೋನಿಯಾಮಕ ರುದ್ರದೇವರನ್ನು ಮನಸಾ ಸ್ಮರಿಸಿ, ಒಳಿತಾಗುವುದು.

 

 

ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಎಂಬಂತೆ ನೀವು ಆಡುವ ಮಾತು ನಿಮ್ಮ ಹತ್ತಿರದ ವೃಕ್ತಿಗೆ ಘಾಸಿಯನ್ನುಂಟು ಮಾಡುವುದು. ಅದರಿಂದ ಆತ ಕುಪಿತನಾಗಿ ನಿಮ್ಮ ಮೇಲೆ ಜಗಳಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ.

 

 

ಹಲವು ದಿನಗಳಿಂದ ಒಂದು ಸ್ಪಷ್ಟ ಸ್ವರೂಪ ಕೊಡಲು ಸಾಧ್ಯವಾಗದ ಒಂದು ಸಂಗತಿಗೆ ನಿಶ್ಚಿತ ರೂಪ ದೊರೆಯಲಿದೆ. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆ ಆಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು.

ನಿಮ್ಮ ಒರಟು ವರ್ತನೆ ನಿಮ್ಮ ಪತ್ನಿಯೊಂದಿಗಿನ ಸಂಬಂಧವನ್ನು ಹಾಳು ಮಾಡಬಹುದು. ಏನಾದರೂ ಕೆಲಸ ಮಾಡುವ  ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ

 

 

ಕೈಹಾಕಿದ ಎಲ್ಲಾ ವಿಷಯದಲ್ಲೂ ಯಶಸ್ಸು ಪಡೆಯುವಿರಿ. ಹಣಕಾಸಿನ ವಿಚಾರದಲ್ಲಿ ನೇರವಾಗಿ ನಿಮ್ಮಿಂದ ತಪ್ಪು ಸಂಭವಿಸದಿದ್ದರೂ ನಿಮ್ಮ ಬಂಧುಗಳಿಂದಲೋ ಅಥವಾ ನಿಮ್ಮ ಸ್ನೇಹಿತರಿಂದಲೋ ತೊಂದರೆ ಅನುಭವಿಸುವಿರಿ.

 

ವೈಯಕ್ತಿಕ ವಿಚಾರಗಳತ್ತ ಗಮನ ಹರಿಸುವುದು ಒಳ್ಳೆಯದು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿ ಹೊಂದುವುವು. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವುದು.

 

ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾಗುವುದು. ಸಂಸಾರದಲ್ಲಿ ನೆಮ್ಮದಿ ದೊರೆಯಲಿದೆ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯ ಉಂಟಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top