fbpx
ಭವಿಷ್ಯ

ಮಾರ್ಚ್ 03- ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, 03 ಮಾರ್ಚ್ 2019
ಸೂರ್ಯೋದಯ : 6:34 am
ಸೂರ್ಯಾಸ್ತ: 6:28 pm
ಶಕ ಸಂವತ : 1940 ವಿಲಂಬಿ

ಅಮಂತ ತಿಂಗಳು :ಮಾಘ
ಪಕ್ಷ : ಕೃಷ್ಣಪಕ್ಷ
ತಿಥಿ : ದ್ವಾದಶೀ 13:44
ನಕ್ಷತ್ರ : Uttaraashadha 09:00
ಯೋಗ :ವರಿಘ 12:31
ಕರಣಂ:ತೈತುಲ 13:44 ಗರಿಜ 27:06

ಅಭಿಜಿತ್ ಮುಹುರ್ತ:12:08 pm – 12:55 pm
ಅಮೃತಕಾಲ :12:24 am – 2:13 am

ರಾಹು ಕಾಲ:4:56 pm – 6:25 pm
ಗುಳಿಕ ಕಾಲ:3:28 pm – 4:56 pm
ಯಮಗಂಡ:12:31 pm – 2:00 pm

 

 
 

ನಿಮ್ಮ ವೈಯಕ್ತಿಕ ಕೆಲಸಗಳು ಮುಗಿದ ಮೇಲೆ ಇತರರ ಕೆಲಸ ಕೈಗೆತ್ತಿಕೊಳ್ಳಿ. ಎರಡು ದೋಣಿಯ ಪ್ರಯಾಣ ಶುಭವಲ್ಲ. ಅಪಾಯವನ್ನು ಎದುರಿಸುವ ಸಾಧ್ಯತೆ ಇದೆ. ಕುಲದೇವತಾ ಆರಾಧನೆ ಮಾಡಿ.

ನಿಮಗೆ ಈಗಿರುವ ಕೆಲಸಗಳೇ ಬೆಟ್ಟದಷ್ಟಿವೆ. ಇದರ ಮಧ್ಯೆ ಸುಮ್ಮನೇ ಬೇಡವಾದ ಹೊರೆ ಹೊರಲು ಮುಂದಾಗದಿರಿ. ದುರ್ಗಾದೇವಿ ಆರಾಧನೆ ಮಾಡಿ. ಸಾಧ್ಯವಾದರೆ ಸ್ವಲ್ಪ ಅವರೇಕಾಳನ್ನು ದಾನ ಮಾಡಿ.

ಎಲ್ಲರಿಗೂ ಸುಲಭವಾದಂಥ ಕೆಲಸವನ್ನು ನೀವು ಕೈಗೆತ್ತಿಕೊಳ್ಳುವುದಿಲ್ಲ. ನಿಮ್ಮ ವಿಶಿಷ್ಟವಾದ ಸ್ವಭಾವವೇ ಅಂತಹದು. ಯಾರೂ ಮಾಡಲಾಗದ್ದನ್ನು ಮಾಡಿ ತೋರಿಸುವ ತವಕ. ಆದರೆ ಅಂತಹ ಸಾಹಸಕ್ಕೆ ಕೈಹಾಕದಿರಿ.

ಅವಸರದ ಸ್ವಭಾವದಿಂದ ಉದ್ಯೋಗದಲ್ಲಿ ಅಡೆತಡೆ ಆಗುವ ಸಾಧ್ಯತೆ ಇದೆ. ಗಣಪತಿ ದೇವರ ಆರಾಧನೆ ಮಾಡುವುದರಿಂದ ಒಳಿತಾಗುವುದು. ಮಿತ್ರರ ಹಾಗೂ ಸಹೋದ್ಯೋಗಿಗಳ ನೆರವನ್ನು ಪಡೆದು ಕಾರ್ಯ ನಿರ್ವಹಿಸಿ.

 

ನೀವು ಬಹು ಚಾಣಾಕ್ಷ ರು. ನಿಮ್ಮ ತಾರ್ಕಿಕ ಬುದ್ಧಿವಂತಿಕೆ ಉಪಯೋಗಿಸಿಕೊಂಡರೆ ಧನಲಾಭ ತಾನೇ ತಾನಾಗಿ ಆಗುವುದು. ಮಕ್ಕಳು ನಿಮ್ಮ ವಿಷಯದ ಬಗ್ಗೆ ಅಸಡ್ಡೆ ತೋರುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡಿ.

 

ತಾಳ್ಮೆಯೊಂದೇ ನಿಮ್ಮನ್ನು ರಕ್ಷಿಸುವ ವಜ್ರಾಯುಧ. ಸಹೋದರರ ಜತೆ ಮನಸ್ತಾಪ ಕಲಹಗಳು ಸಂಭವಿಸುವ ಸಂದರ್ಭವಿದೆ. ಆತ್ಮೀಯರ ಸಂಗಡ ಉತ್ತಮ ಬಾಂಧವ್ಯಇಟ್ಟುಕೊಂಡು ತಾಳ್ಮೆಯಿಂದ ವರ್ತಿಸಿ. ಶುಭವಾಗುವುದು

 

ನಿಮಗೆ ಕಾಲ ಕಾಲಕ್ಕೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ ಸಿಗುವುದರಿಂದ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರೆಯುವವು. ಅಂತಹ ಸುಂದರ ಅವಕಾಶಗಳನ್ನು ಹಾಳು ಮಾಡಿಕೊಳ್ಳಬೇಡಿ.

 

ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆ ಮಾತುಗಳನ್ನು ನಿರೀಕ್ಷಿಸುತ್ತಾರೆ. ಆದರೆ ಎಲ್ಲಾ ವಿಷಯದಲ್ಲೂ ತಪ್ಪು ಹುಡುಕುವ ನಿಮ್ಮ ಸ್ವಭಾವದಿಂದಾಗಿ ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳುವಿರಿ. ಹಾಗಾಗದಂತೆ ಎಚ್ಚರ ವಹಿಸಿ.

 

ಅನ್ಯರು ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿದ್ದಾರೆ. ಧೂರ್ತರನ್ನು ನಯವಾಗಿಯೇ ದೂರವಿಡುವಲ್ಲಿ ಗುರುವಿನ ಆಶೀರ್ವಾದ, ಸಹಕಾರ ನೀಡುವುದು. ನಿಮ್ಮ ದಾರಿ ತಪ್ಪಿಸಲು ಬರುವವರೇ ದಾರಿ ತಪ್ಪುವರು.

ಕೋಪದ ಪ್ರದರ್ಶನದಿಂದಾಗಿ ಸಹಾಯ ಮಾಡಬೇಕೆಂದು ಬಂದಿದ್ದ ನಿಮ್ಮ ಸ್ನೇಹಿತರು ನಿಮಗೆ ಸಹಕರಿಸದೆ ಹೋಗುವ ಸಾಧ್ಯತೆ ಇದೆ. ನಿಮ್ಮ ತಪ್ಪನ್ನು ಅರಿತು ಬಾಳುವುದು ಕ್ಷೇಮ.

 

ಹಾಸಿಗೆ ಇದ್ದಷ್ಟೆ ಕಾಲು ಚಾಚಿ ನಿಮಗೆ ಬೇಸರವೇ ಬಂದಿರಬಹುದು. ಆದರೆ ಹರಿ ನಿನ್ನೊಲುಮೆ ಆಗುವ ತನಕ ಸುಮ್ಮನಿರುವುದು ಲೇಸು ಎಂಬಂತೆ ಬಹು ತಾಳ್ಮೆಯಿಂದ ಇದ್ದಲ್ಲಿ ಅನುಕೂಲವಾಗುವುದು.

 

ದುಡಿಮೆ ದುಡ್ಡಿನ ತಾಯಿ ಎಂದರು ಹಿರಿಯರು. ಹಾಗಾಗಿ ನೀವು ಮಾಡುವ ಕೆಲಸ ಕಾಯಾ ವಾಚಾ ಮನಸ್ಸುಗಳಿಂದ ಕೂಡಿರಲಿ. ಯಶಸ್ಸು ನಿಮ್ಮದಾಗುವುದು. ಹಣವು ನೀರಿನಂತೆ ಖರ್ಚಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top