fbpx
ಸಮಾಚಾರ

ಭಾರತದ ವೀರಪುತ್ರ​ ಅಭಿನಂದನ್​ ಬಗ್ಗೆ ವ್ಯಂಗ್ಯವಾಡಿದ ಕನ್ನಡದ ‘ಸಿಲ್ಕ್​’ ಸಿನಿಮಾದ ಹೀರೋಯಿನ್.

ಪುಲ್ವಾಮ ದಾಳಿ ನಂತರ ಭಾರತ ಬಾಲಾಕೋಟ್​ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ನಂತರ ಭಾರತ-ಪಾಕ್​ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗಲೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿಯೊಬ್ಬರು ಪಾಕ್​ ಸೇನೆಯ ವಶದಲ್ಲಿದ್ದು ವಿಭಾರತಕ್ಕೆ ವಾಪಸ್ಸಾದ ವಿಂಗ್​ ಕಮಾಂಡರ್​ ಅಭಿನಂದನ್​ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಅಭಿನಂದನ್‌ ವರ್ಧಮಾನ್‌ರನ್ನು ಶುಕ್ರವಾರ (ಮಾರ್ಚ್ 1) ಪಾಕಿಸ್ತಾನದಿಂದ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಲಾಯಿತು.. ಆದರೆ ಇದಕ್ಕೂ ಮುನ್ನ ಬಾಲಿವುಡ್‍ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಕನ್ನಡದ ಡರ್ಟಿಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಎಂಬ ಚಿತ್ರದಲ್ಲಿ ನಟಿಸಿದ್ದ ವೀಣಾ ಮಲಿಕ್ ಮಾಡಿರುವ ಟ್ವೀಟ್ ಭಾರಿ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಯಿತು.

ಸಿಲ್ಕ್ ಚಿತ್ರದ ನಟಿ ವೀಣಾ ಮಲಿಕ್ ಅಭಿನಂದನ್ ಅವರನ್ನು ಅಣಕಿಸುತ್ತಾ ಟ್ವೀಟ್ ಮಾಡಿದ್ದಾರೆ. ಅಭಿನಂದನ್ ರನ್ನು ಪಾಕ್ ಸೇನೆ ಬಂಧಿಸಿರುವ ಫೋಟೋವನ್ನು ಟ್ವೀಟ್ ಮಾಡಿರುವ ವೀಣಾ ಮಲಿಕ್ ಅವರು ಈಗಷ್ಟೇ ಬಂದಿದ್ದೀರಿ, ನಿಮಗೆ ತುಂಬಾ ಚೆನ್ನಾಗಿ ಅತಿಥಿ ಸರ್ಕಾರ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದರು.

ಎರಡೂ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಇತಂಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ನಟಿ ವೀಣಾ ಮಲಿಕ್ ವ್ಯಂಗ್ಯವಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top