ಸಮಾಚಾರ

ಐಪಿಎಲ್ 2019: ದೆಹಲಿ ತಂಡವನ್ನು ಸೇರಿಕೊಂಡ ಟೀಂ ಇಂಡಿಯಾ ಮಾಜಿ ಯಶಸ್ವಿ ನಾಯಕ.

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ಪಾರಂಭಕ್ಕೆ ಇನ್ನೇನು ದಿನಗಣನೆ ಪ್ರಾರಂಭವಾಗಿದ್ದು ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರನ್ನಾಗಿ ನೇಮಗೊಳಿಸಲಾಗಿದೆ.

 

 

ಇದಕ್ಕೆ ಸಂಬಂಧಿಸಿದಂತೆ ಪ್ರಾಂಚೈಸಿ ಮಾಹಿತಿ ಹೊರಹಾಕಿದೆ. ಡೆಲ್ಲಿ ತಂಡ ಗಂಗೂಲಿ ಸೇವೆ ಬಳಸಿಕೊಳ್ಳಲು ಉತ್ಸುಕವಾಗಿದೆ ಎಂದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ ತಮಗೆ ವಹಿಸಿರುವ ನೂತನ ಜವಾಬ್ದಾರಿ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳ ಜತೆಗೆ ನಿಕಟವಾಗಿ ಕೆಲಸ ನಿರ್ವಹಿಸುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಅಂದಹಾಗೆ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದೆಹಲಿ ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದ್ದರೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದೀಗ ಸಲಹೆಗಾರನಾಗಿ ಗಂಗೂಲಿ ಕೂಡ ಸೇರಿಕೊಂಡಿರುವುದು ಡೆಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಐಪಿಎಲ್ ಆರಂಭದಿಂದಲೂ ಇಲ್ಲಿಯವರೆಗೆ ಐಪಿಎಲ್​ ಕಪ್ ಗೆಲ್ಲಲು ವಿಫಲವಾಗಿ​ ಮುಖಭಂಗ ಅನುಭವಿಸುತ್ತಿರುವ ಡೆಲ್ಲಿ ತಂಡವು ಈ ಸಲ ಹೊಸ ಹೊಸ ಪ್ಲಾನ್​ಗಳೊಂದಿಗೆ ಕಣಕ್ಕಿಳಿಯುತ್ತಿದೆ.. ಡೆಲ್ಲಿ ಡೇರ್ ಡೆವಿಲ್ ಎಂದು ಇದ್ದ ಹೆಸರನ್ನು ಬದಲಾಯಿಸಿಕೊಂಡಿದ್ದಲ್ಲದೇ ಜೆರ್ಸಿಯನ್ನು ಬದಲಾಯಿಸಿಕೊಂಡಿದೆ. ಇನ್ನು ಯುವ ಆಟಗಾರ ಶ್ರೇಯಸ್ ಅಯ್ಯರ್ ಡೆಲ್ಲಿ ತಂಡಕ್ಕೆ ನಾಯಕನಾಗಿ ಮುನ್ನಡೆಸಲಿದ್ದಾರೆ. ತಂಡ ಮಾರ್ಚ್​ 24ರಂದು ಮುಂಬೈ ವಿರುದ್ಧ ಸೆಣಸಾಟದೊಂದಿಗೆ ಅಭಿಯಾನ ಆರಂಭ ಮಾಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top