fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ KGF ನಟ ‘ಕಾಮಿಡಿ ಕಿಲಾಡಿ’ ಖ್ಯಾತಿಯ ಗೋವಿಂದೇಗೌಡ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದ ಗೋವಿಂದೇಗೌಡ (ಜಿಜಿ) ಮತ್ತು ದಿವ್ಯಶ್ರೀ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ನಿನ್ನೆ ಶೃಂಗೇರಿಯಲ್ಲಿ ಇಬ್ಬರೂ ಸಿಂಪಲ್​ ಆಗಿ ವಿವಾಹವಾಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರು ಆಪ್ತರು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ರು.

ಶೋನಲ್ಲಿಯೇ ಒಬ್ಬರನ್ನೊಬ್ಬರು ಇಷ್ಟ ಪಟ್ಟ ಈ ಜೋಡಿ ಕುಟುಂಬದ ಒಪ್ಪಿಗೆಯೊಂದಿಗೆ ನವಜೀವನ ಆರಂಭಿಸಿದೆ. ಎರಡೂ ಕುಟುಂಬಗಳ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ದಿವ್ಯಾಶ್ರೀ ಹಾಗೂ ಗೋವಿಂದೇ ಗೌಡರ ಮನೆಯಲ್ಲಿ ಮದುವೆ ಸಂಬಂಧ ಹುಡುಕುತ್ತಿದ್ದರು. ಇದೆ ವೇಳೆ ದಿವ್ಯಾ ತಂದೆ ತುಂಬಾ ಅನ್ಯೋನ್ಯವಾಗಿರುವ ಈ ಇಬ್ಬರಿಗೂ ಮದುವೆ ಮಾಡೋಣ ಅಂತ ನಿರ್ಧರಿಸಿ, ಕಳೆದ ಸೆಪ್ಟೆಂಬರ್​ನಲ್ಲಿ ಮಾತು-ಕತೆ ನಡೆಸಿದ್ದರು.

ಇದಲ್ಲದೇ ಇತ್ತೀಚೆಗಷ್ಟೇ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ನಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಅವಕಾಶ ಪಡೆದಿರುವ ಗೋವಿಂದೇ ಗೌಡ ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ಇನ್ನು ದಿವ್ಯಾಶ್ರೀ ಅವರು ಪುಣ್ಯಾತ್ ಗಿತ್ತೀಯರು ಚಿತ್ರದಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top