fbpx
ಮನೋರಂಜನೆ

ಅಭಿಮಾನಿಗಳಿಗೆ ಡಬಲ್ ಧಮಾಕ -ಪುನೀತ್ ಹುಟ್ಟುಹಬ್ಬಕ್ಕೆ ‘ಜೇಮ್ಸ್’ ಚಿತ್ರತಂಡದಿಂದ ಸಿಗಲಿದೆ ಮತ್ತೊಂದು ಗಿಫ್ಟ್.

ಮಾರ್ಚ್ 17ಕ್ಕೆ ಪವರ್ ಸ್ಟಾರ್ ಹುಟ್ಟು ಹಬ್ಬ. ಅಭಿಮಾನಿಗಳ ಸಂಭ್ರಮ ಒಂದೆಡೆ ಆದರೆ, ಪುನೀತ್ ಅವರ ಮುಂದಿನ ಸಿನಿಮಾಗಳ ಪೋಸ್ಟರ್, ಫರ್ಸ್ಟ್ ಲುಕ್ ಹೀಗೆ ಕೆಲವು ವಿಚಾರಗಳು ಬಹಿರಂಗಗೊಳ್ಳಲಿದ್ದು ಅಭಿಮಾನಿಗಳಿಗಂತೂ ಡಬ್ಬಲ್ ಧಮಾಕ ರೆಡಿಯಾಗಿದೆ. ಯುವರತ್ನ ಚಿತ್ರತಂಡ ಪುನೀತ್ ಹುಟ್ಟುಹಬ್ಬಕ್ಕೆ ಫರ್ಸ್ಟ್ ಲುಕ್ ರಿವೀಲ್ ಮಾಡಲಿದೆ ಎಂಬ ಸುದ್ದಿಯ ಬಳಿಕ ಅಪ್ಪು ಮುಂದಿನ ಪ್ರಾಜೆಕ್ಟ್ ‘ಜೇಮ್ಸ್’ ಚಿತ್ರತಂಡದಿಂದಲೂ ಗುಡ್ ನ್ಯೂಸ್ ಒಂದು ಸಿಕ್ಕಿದೆ.

ಜೇಮ್ಸ್ ಮೋಷನ್ ಪೋಸ್ಟರ್:
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದಲ್ಲಿ ಪುನೀತ್ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17 ರಂದು ಜೇಮ್ಸ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ.

ಕಿಶೋರ್ ಪತ್ತಿಕೊಂಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ಆದಷ್ಟು ಶೀಘ್ರವೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ಚೇತನ್ ಸದ್ಯ ಶ್ರೀಮುರುಳಿ ಮತ್ತು ಶ್ರೀಮುರುಳಿ ನಟನೆಯ ಭರಾಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಅಪ್ಪು ಅದು ಮುಗಿದ ಕೂಡಲೇ ಜೇಮ್ಸ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top