ಸಮಾಚಾರ

“ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ” ಕಿಚ್ಚು ಹಚ್ಚಿದ ರಮ್ಯಾ.

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪ, ವಾಗ್ದಾಳಿ, ಕಾಲೆಳೆಯುವಿಕೆ, ಕೆಸೆರೆರೆಚಾಟ, ವ್ಯಂಗ್ಯದಂತಹ ಪ್ರಹಸನಗಳು ಜೋರಾಗಿಯೇ ಕೇಳಿ ಬರಲು ಆರಂಭಿಸಿವೆ, ಇದೀಗ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ.

ಪ್ರಧಾನಿ ಮೋದಿ ಅವರ ಬೆಂಬಲಿಗರನ್ನು ‘ಮೂರ್ಖರು’ ಎಂದು ಲೇವಡಿ ಮಾಡುವ ಮೀಮ್ ಅನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಮ್ಯಾ ಅವರ ಟ್ವೀಟ್‌ಗೆ ಅಷ್ಟೇ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮೋದಿ ಬೆಂಬಲಿಗರನ್ನು ಉದ್ದೇಶಿಸಿ ವ್ಯಂಗ್ಯವಾಡಿರುವ ರಮ್ಯಾ.. ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ ಎಂದು ಮೋದಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದನ್ನು ತಮ್ಮ ನೆಚ್ಚಿನದ್ದು ಎಂದು ವ್ಯಂಗ್ಯ ಮಾಡಿದ್ದಾರೆ.

 

 

ಈ ವಿಚಾರವನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಆ ಸಂಸ್ಥೆಗೂ ಧನ್ಯವಾದ ಹೇಳುವ ಮೂಲಕ ರಮ್ಯಾ ಆ ಸಂಸ್ಥೆಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top