ಮನೋರಂಜನೆ

ತುಂಬು ಗರ್ಭದ ಫೋಟೋವನ್ನು ಟ್ರೋಲ್ ಮಾಡಿದ ಅಪಾಪೋಲಿಗಳ ಚಳಿ ಬಿಡಿಸಿದ ವರದನಾಯಕನ ಬೆಡಗಿ.

ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಇದೀಗ ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ಗರ್ಭಿಣಿ ಆಗಿದ್ದು, ಟ್ರೋಲ್ ಮಾಡುವವರಿಗೆ ಚಳಿ ಬಿಡಿಸಿದ್ದಾರೆ.

ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಸಮೀರಾ ಗರ್ಭಿಣಿ ಆದ ಕಾರಣ ಅವರ ತೂಕ ಹೆಚ್ಚಾಗಿದೆ. ಅದಕ್ಕಾಗಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

 

 

ಟ್ರೋಲ್‍ಗಳಿಗೆ ಪ್ರತಿಕ್ರಿಯಿಸಿದ ಸಮೀರಾ, “ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ. ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿ ಇತ್ತಾ?. ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮೀರಾ ರೆಡ್ಡಿ, “ಮದುವೆಯಾಗಿ, ಮಕ್ಕಳನ್ನು ಹಡೆದ ಬಳಿಕ ಕೂಡ ಕೆಲವರು ಕರೀನಾ ಕಪೂರ್ ತರಹ ಸುಂದರವಾಗಿ ಹೊಳೆಯುತ್ತಿರುತ್ತಾರೆ. ಇನ್ನೂ ಕೆಲವರು ನನ್ನಂತೆ ತೆಳ್ಳಗಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಎಲ್ಲರೂ ಕರೀನಾ ಅವರಂತೆ ಇರಬೇಕು ಎಂದೇನು ಇಲ್ಲವಲ್ಲ. ಮಹಿಳೆಯರಿಗೆ ಬಾಡಿ ಶೇಮಿಂಗ್ (ದೇಹದ ಆಕೃತಿಯ ಬಗ್ಗೆ ಕಾಮೆಂಟ್ ಮಾಡುವುದು) ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top