ಮನೋರಂಜನೆ

ಪುನೀತ್ ಹುಟ್ಟುಹಬ್ಬಕ್ಕೆ ‘ಯುವರತ್ನ’ ತಂಡದಿಂದ ಭರ್ಜರಿ ಉಡುಗೊರೆ.

ಮಾರ್ಚ್ 17ಕ್ಕೆ ಪವರ್ ಸ್ಟಾರ್ ಹುಟ್ಟು ಹಬ್ಬ. ಅಭಿಮಾನಿಗಳ ಸಂಭ್ರಮ ಒಂದೆಡೆ ಆದರೆ, ಪುನೀತ್ ಅವರ ಮುಂದಿನ ಚಿತ್ರ ಯುವರತ್ನ ಚಿತ್ರತಂಡ ಪುನೀತ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡಲಿದ್ದಾರೆ..

ಫರ್ಸ್ಟ್ ಲುಕ್ ಬಿಡುಗಡೆ:
ಪುನೀತ್ ಹುಟ್ಟುಹಬ್ಬಕ್ಕೆ ಯುವರತ್ನ ಚಿತ್ರತಂಡವು ಚಿತ್ರದ ಮೊದಲ ಲುಕ್ ಅನ್ನು ರಿವೀಲ್ ಮಾಡಲಿದೆ. ಸೂಪರ್ ಸ್ಟೈಲಿಶ್ ಮಾತು ಮಾಸ್ ಪೋಸ್ಟರ್ ಇದಾಗಲಿದ್ದು ಮಾರ್ಚ್ 17 ರಂದು ಅನಾವರಣಗೊಳ್ಳಲಿದೆ.

 

 

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಮಿಕ್ಕ ತಾರಾಗಣ ಮಾಹಿತಿಗಳು ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಇತ್ತೀಚಿಗಷ್ಟೇ ಶೂಟಿಂಗ್ ಪ್ರಾರಂಭಿಸಿದ್ದ ಯುವರತ್ನ ಚಿತ್ರತಂಡ ಅದಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದ್ದು ಮುಂದಿನ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

16ವರ್ಷಗಳ ನಂತರ ಕಾಲೇಜು ಹುಡುಗನ ಪಾತ್ರದಲ್ಲಿ ಅಪ್ಪು:
‘ಯುವರತ್ನ’ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ನಟಿಸ್ತಿದ್ದಾರೆ. ವಿಶೇಷವೆಂದರೆ 16 ವರ್ಷದ ಬಳಿಕ ಪವರ್ ಸ್ಟಾರ್​ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಾರೆ. ತಮ್ಮ ಆರಂಭದ ಚಿತ್ರಗಳಾದ ಅಪ್ಪು, ಅಭಿ ಸಿನಿಮಾಗಳಲ್ಲಿ ಪುನೀತ್ ಕಾಲೇಜು ಹುಡುಗನಾಗಿ ಮಿಂಚಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top