fbpx
ಸಮಾಚಾರ

“ನಾನು ಬ್ರಾಹ್ಮಣ, ಚೌಕಿದಾರ್ ಆಗಲು ಸಾಧ್ಯವಿಲ್ಲ” ಮೋದಿಗೆ ಟಾಂಗ್ ಕೊಟ್ಟ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷಕ್ಕೆ ಆರಂಭದಿಂದಲೂ ಬಿಸಿತುಪ್ಪವಾಗಿ ಪರಿಣಮಿಸಿರುವ ಬಿಜೆಪಿ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಪ್ರಧಾನಿ ಮೋದಿಗೆ ಟಾಂಗ್​ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಆರಂಭಿಸಿರುವ ‘ನಾನು ಚೌಕೀದಾರ್’​ ಎಂಬ ಪ್ರಚಾರ ತಂತ್ರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಆಗುತ್ತಿದೆ .

 

 

ಪ್ರಧಾನಿ ಮೋದಿ ಅವರ ಅಣತಿಯಂತೆ ದೇಶದೆಲ್ಲೆಡೆ ನಾನು ‘ಚೌಕಿದಾರ’ ಎಂದು ಟ್ವಿಟ್ಟರ್ ನಲ್ಲಿ ಹೆಸರು ಬದಲಾಯಿಸಿಕೊಂಡು ಟ್ರೆಂಡಿಂಗ್ ಮಾಡಲಾಯಿತು. ಆದರೆ, ಬಿಜೆಪಿ ಹಿರಿಯ ಮುಖಂಡ, ಸುಬ್ರಮಣಿಯನ್ ಸ್ವಾಮಿ ಮಾತ್ರ ತಮ್ಮ ಟ್ವಿಟ್ಟರ್ ಖಾತೆ ಹೆಸರು ಬದಲಾಯಿಸಿಕೊಂಡಿರಲಿಲ್ಲ. ಈ ಬಗ್ಗೆ ತಮಿಳು ಸುದ್ದಿವಾಹಿನಿಯೊಂದರ ಜೊತೆ ಮಾತನಾಡುತ್ತಾ, ಚೌಕಿದಾರ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ವಾಮಿ ಹೇಳಿಕೊಂಡಿದ್ದಾರೆ.

ನಾನು ಚೌಕಿದಾರ್ ಅಲ್ಲ, ಬ್ರಾಹ್ಮಣ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ತಮಿಳು ವಾಹಿನಿಯೊಂದರ ಸಂದರ್ಶನದಲ್ಲಿ, ನಿಮ್ಮ ಟ್ವೀಟ್ ಖಾತೆಯ ಹೆಸರಿನ ಮುಂದೆ ಚೌಕಿದಾರ್ ಅಂತ ಯಾಕೆ ಸೇರಿಸಿಲ್ಲ ಎಂದು ವರದಿಗಾರ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ನಾನು ಚೌಕಿದಾರ್ ಆಗುವುದಿಲ್ಲ. ಯಾಕೆಂದರೆ ನಾನು ಬ್ರಾಹ್ಮಣ. ಹೀಗಾಗಿ ಬ್ರಾಹ್ಮಣರು ಚೌಕಿದಾರ್ ಆಗಲು ಸಾಧ್ಯವಿಲ್ಲ. ಇದು ಸತ್ಯ ಕೂಡ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top