ಸಮಾಚಾರ

ಆಡಿಯೋ ಬಾಂಬ್- ದರ್ಶನ್ ಮಾತನಾಡಿದ್ದಾರೆ ಎನ್ನಲಾದ ಹೊಲಸು ಆಡಿಯೋ ವೈರಲ್.

ನಟಿ ಸುಮಲತಾ ಅಂಬರೀಷ್​ ಅವರಿಗೆ ನಟರಾದ ದರ್ಶನ್​ ಹಾಗೂ ಯಶ್​ ಬಹಿರಂಗವಾಗಿ ಬೆಂಬಲ ಘೋಷಿಸಿದಾಗಿನಿಂದ ನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದರ್ಶನ್​ ಧ್ವನಿ ಎನ್ನಲಾದ ಆಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​​ ವಿರುದ್ಧ ಅಂಬರೀಷ್​ ಸೋತಾಗ ಮಂಡ್ಯ ಜನತೆಯ ಬಗ್ಗೆ ದರ್ಶನ್​ ಮಾತನಾಡಿರುವ ಆಡಿಯೋ ಎನ್ನಲಾಗಿದೆ. ಆಡಿಯೋದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಮಂಡ್ಯ ಜನರ ಬಗ್ಗೆ ಕೀಳು ಭಾಷೆಯಲ್ಲಿ ಜರಿದಿದ್ದಾರೆ ಎಂದು ಹೇಳಲಾಗಿದೆ.

ನಟ ಅಂಬರೀಶ್ ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಆಗ ದರ್ಶನ್ ಅವರು ಮಂಡ್ಯ ಜನತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ದರ್ಶನ್ ಅವರದ್ದ ಅಥವಾ ಅವರಂತೆ ಬೇರೆಯವರು ಧ್ವನಿ ನೀಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಆಡಿಯೋದಲ್ಲಿ ಏನಿದೆ?
ದರ್ಶನ್: ಮಂಡ್ಯದವರು ನೀವು, ಎಷ್ಟೇ ಆದರೂ ಇವತ್ತು ಈ ಕಡೆಗೆ ಜೈ, ನಾಳೆ ಆ ಕಡೆಗೂ ಜೈ
ಅಭಿಮಾನಿ-1: ಓ…..ಅಣ್ಣಾ ನೀವ್ ಯಾಕೋ ಈಗ ರೂಟ್‍ಗೆ ಬರ್ತಾ ಇದ್ದೀರಿ.
ಅಭಿಮಾನಿ-2: ಅಣ್ಣ ಯಾಕಣ್ಣ, ಕುಮಾರಣ್ಣನಿಗೂ ಜೈ, ಎಸ್‍ಎಂ ಕೃಷ್ಣನಿಗೂ ಜೈ
ದರ್ಶನ್: ಹೂ ಕಣಪ್ಪ ಈ ಸರಿ ಹೋಗಿಬಿಟ್ಟು ಎಲ್ಲಾ ಕುಮಾರಣ್ಣನಿಗೆ ಮಾಡಿಬಿಟ್ರಿ ಈ ಸಲ.
ಅಭಿಮಾನಿ-2: ಅದಿಕ್ಕೆ ಕಳಿಸಿದ್ರ ಅಣ್ಣನ್ನ ಕುಮಾರಣ್ಣನಿಗೆ ಮಾಡೋಕೆ.
ದರ್ಶನ್: ಪಾಪ ಇದ್ರು ಬಗ್ಗೆ ಯಾರೋ ಸಿಕ್ಕಿದ್ನಪ್ಪ ಎಲ್ಲಿ, ಸಿಂಗಪೂರ್ ಅಲ್ಲಿ.
ದರ್ಶನ್: ಮಂಡ್ಯ ಅಣ್ಣ, ಅಂಬರೀಷ್ ಅಣ್ಣ ಅಂದ . “ಹ್ಮ್ *********************** ಅಂಬರೀಶ್ ಅಣ್ಣನ ನಿಲ್ಲಿಸಿಬಿಟ್ಟು ಸೋಲಿಸಿಬಿಟ್ರಿ”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top