fbpx
ಸಮಾಚಾರ

“ಸಬ್ ಅರ್ಬನ್ ರೈಲ್ವೆ ಯೋಜನೆಯಲ್ಲಿ ಸ್ಥಳೀಯರ ಸಲಹೆಯನ್ನು ಕಡೆಗಣಿಸಬೇಡಿ” ಸಂಸದ ಜಿಸಿ ಚಂದ್ರಶೇಖರ್.

ಬೆಂಗಳೂರು ಸುತ್ತಮುತ್ತಲಿನ ಪುರ ಮತ್ತು ಪಟ್ಟಣಗಳಿಗೆ ಈಗಾಗಲೇ ಇರುವ ರೈಲುಹಳಿಗಳನ್ನು ಉಪಯೋಗಿಸಿಕೊಂಡು ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ ಬೆಂಗಳೂರು ಉಪನಗರ ರೈಲು ಸೇವೆ. ಉಪನಗರ ರೈಲಿನ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಬೇಕೆಂದು ಬಹಳ ದಿನಗಳಿಂದ ಬೇಡಿಕೆಯಿದೆ.

 

 

 

ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಳೆದ ತಿಂಗಳು ನಡೆಸಿದ ಸಭೆಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಲು ಸಮ್ಮತಿಸಿದ್ದರು.. ಇದೀಗ ಈ ಯೋಜನೆಯ ವಿಚಾರವಾಗಿ ಸ್ಥಳೀಯ ಅಭಿಪ್ರಾಯ ಮತ್ತು ಸಲಹೆಗಳನ್ನು ಸ್ವೀಕರಿಸಬೇಕು ಎಂದು ರಾಜ್ಯ ಸಭಾ ಸದ್ಯಸ್ಯ ಜಿಸಿ ಚಂದ್ರಶೇಖರ್ ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಿಸಿ ಚಂದ್ರಶೇಖರ್ ತಿಳಿಸಿದ್ದಾರೆ.

“ಸಬ್ ಅರ್ಬನ್ ರೈಲ್ವೆ ಯೋಜನೆ ಕುರಿತು ಸ್ಥಳೀಯರ ಸಲಹೆಗಳನ್ನು ಪರಿಗಣಿಸಬೇಕು. ಈ ಯೋಜನೆಯ ರೈಲುಗಳ ಟೈಮಿಂಗ್ಸ್ ಅವಶ್ಯಕತೆಗೆ ಬೇಕಾದ ವೇಳೆ ಇಲ್ಲ ಎಂಬ ದೂರುಗಳು ಈಗಾಗಲೇ ಅನೇಕ ಸಂಸ್ಥೆಗಳು, ಮತ್ತು NGO ಗಳ ಮೂಲಕ ಕೇಳಿಬರುತ್ತಿವೆ. ಕೆಲಸಗಾರರು, ಸಾಫ್ಟ್ ವೇರ್ ಕಂಪನಿಗಳ ಉದ್ಯೋಗಿಗಳ ಕಚೇರಿ ಸಮಯಕ್ಕೆ ಅನುಕೂಲವಾಗುವಂತೆ ರೈಲುಗಳ ವ್ಯವಸ್ಥೆ ಮಾಡಬೇಕು ಎಂಬ ಸಲಹೆ ಅನೇಕ ಕಡೆಯಿಂದ ಕೇಳಿಬರುತ್ತಿದೆ. ಹೀಗಾಗಿ ಮೊಬೈಲ್ ಆಪ್ ಅಥವಾ ವೆಬ್ ಸೈಟ್ ಮೂಲಕ ಸ್ಥಳೀಯರ ಸಲಹೆಯನ್ನು ಆಲಿಸಿ ಅವುಗಳನ್ನು ಪರಿಗಣಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ” ಎಂದು ತಮ್ಮ ಪತ್ರದಲ್ಲಿ ಜಿಸಿಸಿ ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top