fbpx
ಸಮಾಚಾರ

ಶ್ರೀಮಂತ ಅಭ್ಯರ್ಥಿನಿಖಿಲ್ ಕುಮಾರಸ್ವಾಮಿ ಹೊಂದಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

ಮಂಡ್ಯ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಾವು ಹೊಂದಿರುವ ಒಟ್ಟು ಆಸ್ತಿಯ ವಿವರವನ್ನು ನಿಖಿಲ್ ಕುಮಾರ್ ನೀಡಿದ್ದಾರೆ. ಹಾಗಿದ್ದಾರೆ ನಿಖಿಲ್ ಹೊಂದಿರುವ ಒಟ್ಟು ಆಸ್ತಿ ಎಷ್ಟು ಅಂತೀರಾ? ಮುಂದೆ ಓದಿ.

ನಿಖಿಲ್ ಕುಮಾರಸ್ವಾಮಿ 56.47 ಕೋಟಿ ರೂ. ಒಡೆಯ ಎಂದು ಘೋಷಿಸಿಕೊಂಡಿದ್ದಾರೆ. ಚುನಾವಣಾ ಅಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿದ ಚುನಾವಣಾ ಅಫಿಡವಿಟ್​ನಲ್ಲಿ ನಿಖಿಲ್​ ತಮ್ಮ ಆಸ್ತಿ ವಿವರಗಳನ್ನು ನಮೂದಿಸಿದ್ದು, ತಮ್ಮ ಬಳಿ 17.53 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 22.53 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.

ನಿಖಿಲ್ ಮೇಲೆ ಇರುವ ಸಾಲ:
ಅಷ್ಟೇ ಅಲ್ಲದೆ ತಾವು 2.40 ಕೋಟಿ ರೂ. ಸಾಲ ಮಾಡಿಕೊಂಡಿದ್ದು, ತನಗೆ ವಾರ್ಷಿಕ 71.47 ಲಕ್ಷ ರೂ. ಆದಾಯವಿದೆ. 200 ಗ್ರಾಮ್ ಚಿನ್ನ ಇದೆ. 3,11,49,255 ರೂ. ಮೌಲ್ಯದ ರೇಂಜ್​ ರೋವರ್​ ಕಾರು, 23,03,250 ರೂ. ಮೌಲ್ಯದ ಮಿನಿಟಿ ವ್ಯಾನ್​ ಇದೆ. 10,77,773 ರೂ. ಹೂಡಿಕೆ ಮಾಡಿದ್ದೇನೆ ಎಂದು ನಿಖಿಲ್​ ತಿಳಿಸಿದ್ದಾರೆ.

ಇನ್ನು ನಿಖಿಲ್ ಮೇಲೆ ಯಾವುದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿಲ್ಲ. ಕೋರ್ಟ್ ಕೇಸ್ ಗಳು ಕೂಡ ಇಲ್ಲ ಎಂದು ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top