fbpx
ಸಮಾಚಾರ

ಕನ್ನಡಿಗರ ಆಕ್ರೋಶಕ್ಕೆ ಕಾರಣರಾದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರೈ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರೈ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ಏಕೆಂದರೆ ಕರ್ನಾಟಕದ ನೆಲದಲ್ಲಿ ನಿಂತು ತಮಿಳು ಭಾಷಣ , ಮತದಾರರನ್ನು ಸೆಳೆಯುವ ಸಲುವಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರೈ ತಮಿಳಿನಲ್ಲಿ ಭಾಷಣ ಮಾಡಿ ಪ್ರಚಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರಕಾಶ್ ರೈ ತಮಿಳಿನಲ್ಲಿ ಭಾಷಣ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು ಈ ಕೆಳಗಿನ ರೀತಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

 


“ನಿಮ್ಮ ರಾಜಕೀಯ ಏನಾದ್ರು ಮಾಡ್ಕೊಳ್ಳಿ.. ಆದ್ರೆ ಕನ್ನಡವನ್ನೇ ಬಳಸಿ ಅಷ್ಟೇ..
Prakash Raj..ಅವರೇ ಕರ್ನಾಟಕದ ಭಾಷೆ ಕನ್ನಡ..ತಮಿಳ್ ಅಲ್ಲ..😡😡
ಇಲ್ಲಿರೋ ಜನಕ್ಕೆ ಕನ್ನಡ ಅರ್ಥ ಅಗುತ್ತೆ.. ಮರೆಯದಿರಿ.
ವೊಟ್ಗಾಗಿ ಕನ್ನಡವನ್ನೇ ಮರೆತಿರೋ ಇವರಿಗೆ ಕನ್ನಡಿಗರ ಧಿಕ್ಕಾರ..
ಮೊದಲು ಕನ್ನಡಕ್ಕೆ ಬೆಲೆ ಕೊಡಿ.. ಕನ್ನಡದಲ್ಲೇ ಮಾತಡಿ….
ವೋಟ್ ಗಾಗಿ ಭಾಷೆಯನ್ನು ಮಣ್ಣುಮುಕ್ಕಿಸುತ್ತಿರೋ ಪ್ರಕಾಶ್ ರಾಜ್.. ಇದು ತಮಿಳ್ನಾಡಲ್ಲಾ ಇದು ಕರ್ನಾಟಕ….
ನಿಮ್ಮ ಈ ಕನ್ನಡ ವಿರೋಧಿತನಕ್ಕೆ ಧಿಕ್ಕಾರ..
ಕರ್ನಾಟಕ ದಲ್ಲಿ ಇರುವ ತಮಿಳರು ಇಲ್ಲೇ ಹುಟ್ಟಿ.. ಇಲ್ಲೆಬೆಳೆದು.. ಇಲ್ಲೆಬದುಕು ಕಟ್ಟಿ ಕೊಂಡವರು..
ಕನ್ನಡ ಚನ್ನಾಗಿ.. ಬರೆಯಲು.. ಓದಲು.. ಮಾತಾಡಲು ಬರುತ್ತೆ.. ಅವ್ರು ಕನ್ನಡಿಗರೇ…
ಒಂದು ಬಾಷೆಗೆ ಬೆಲೆ ಕೊಡದವರು ನಾಚಿಕೆ ಆಗ್ಬೇಕು”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top