ಮನೋರಂಜನೆ

ಸರ್ಕಾರದ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರಿದ ಸುಮಲತಾ- ದೂರಿನಲ್ಲೇನಿದೆ?

ಹೈವೋಲ್ಟೇಜ್ ಕಣವಾಗಿ ಪರಿಣಮಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ದಿನಾಂಕ ಘೋಷಿಸಿರುವ ಬೆನ್ನಲ್ಲೇ ರಾಜಕೀಯ ರಂಗೇರಿದೆ. ಈ ಸಲ ಮಂಡ್ಯ ಲೋಕಸಭೆ ಕ್ಷೇತ್ರ ತೀರಾ ಕುತೂಹಲ ಮೂಡಿಸಿದ್ದು ಒಂದು ಕಡೆ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಚುನಾವಣೆಗೆ ಅಭ್ಯರ್ಥಿಯ ಸ್ಥಾನದಲ್ಲಿ ಮಂಡ್ಯದಲ್ಲಿ ಭಾಗವಹಿಸಿದರೆ, ಇನ್ನೊಂದು ಕಡೆ ಮುಖ್ಯಮಂತ್ರಿಯ ಮಗ ನಿಖಿಲ್ ಕುಮಾರ್ ಸ್ವಾಮಿ ಕೂಡ ಅದೇ ಜಾಗಕ್ಕೆ ಸುಮಲತಾ ಅವರಿಗೆ ಪೈಪೋಟಿ ನೀಡಲಿದ್ದಾರೆ.. ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪಾರದರ್ಶಕ ಚುನಾವಣೆಗೆ ಆಯೋಗ ಹೆಚ್ಚಿನ ಅಧಿಕಾರಿಗಳನ್ನು ಹಾಕಬೇಕು. ಬೆದರಿಕೆಯ ಹೇಳಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಎಂದು ಹೇಳಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಯಾವುದೇ ಬೆಂಬಲಿಗರಿಲ್ಲದೆ ಸಂಬಂಧಿಯೊಬ್ಬರ ಜತೆ ಬಂದು ಸುಮಲತಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top