fbpx
ಸಮಾಚಾರ

ಕಾಂಗ್ರೆಸ್ ಸೇರ್ಪಡೆಗೊಂಡ ಟೀಮ್ ಇಂಡಿಯಾ ಸ್ಟಾರ್ ಆಟಗಾರನ ತಂದೆ ಮತ್ತು ಅಕ್ಕ- ಆದರೆ ಪತ್ನಿ ಬಿಜೆಪಿಯಲ್ಲಿ.

ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಅವರು ಬಿಜೆಪಿ ಸೇರಿದ್ದರು. ಇದೀಗ ಜಡೇಜಾ ಅವರ ಅಕ್ಕ ಈಗ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಜಡೆಜಾ ಅವರ ತಂದೆ ಅನಿರುದ್ಧ ಸಿನ್ಹಾ, ಹಾಗೂ ಸಹೋದರಿ ನೈನಬಾ ಗುಜರಾತ್‍ನ ಜಾಮ್‍ನಗರ ಜಿಲ್ಲೆಯ ಕಲವಾಡ್ ನಗರದಲ್ಲಿ ನಡೆದ ಒಂದು ರ‍್ಯಾಲಿ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಜಾಮ್​ನಗರ ಇಲ್ಲೆಯ ಕಲವದ್​ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಟೀದಾರ್​ ಮೀಸಲಾತಿ ಹೋರಾಟಗಾರ ಮತ್ತು ಕಾಂಗ್ರೆಸ್​ ನಾಯಕ ಹಾರ್ದಿಕ್​ ಪಟೇಲ್​ ನೇತೃತ್ವದಲ್ಲಿ ಜಡೇಜಾ ತಂದೆ ಅನಿರುದ್ಧ್ ಸಿನ್ಹ್​ ಜಡೇಜಾ ಮತ್ತು ಅವರ ಅಕ್ಕ ನೈನಾಬಾ ಜಡೇಜಾ ಕಾಂಗ್ರೆಸ್​ಗೆ ಸೇರ್ಪಡೆಯಾದರು. ”ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಯುವಕರು, ಮಹಿಳೆಯರು, ರೈತರ ಪರವಾಗಿಲ್ಲ ಎನ್ನುವುದು ಕಾಂಗ್ರೆಸ್‌ ಸೇರಲು ಕಾರಣ,” ಎಂದು ಜಡೇಜಾ ತಂದೆ ಮತ್ತು ಅಕ್ಕ ಹೇಳಿದರು.

 

 

 

ಸದ್ಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಜಡೇಜಾ, ಮುಂಬರುವ ಲೋಕಸಭಾ ಚುನಾವಣೆಗಿಂತ, ವಿಶ್ವಕಪ್ ತಂಡ ಸೇರಿಕೊಳ್ಳೋ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಆದರೆ ಜಡೇಜಾ ಕುಟುಂಬ ಸದ್ಯರು ಒಂದೊಂದು ರಾಜಕೀಯ ಪಕ್ಷ ಸೇರೋ ಮೂಲಕ ಜಡ್ಡುಗೆ ಸಂಕಷ್ಠ ತಂದೊಡ್ಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top