ಸಮಾಚಾರ

“ತಂದೆ ದೇವೇಗೌಡರನ್ನೇ ಮನೆಯಿಂದ ಹೊರಹಾಕಿದ್ದ ಕುಮಾರಸ್ವಾಮಿ” ಶಾಸಕ ಮಾಧುಸ್ವಾಮಿ ವಿಡಿಯೋ ವೈರಲ್

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಮಾಧುಸ್ವಾಮಿ ಗಂಭೀರ ಆರೋಪ ಮಾಡಿದ್ದು ಇದಕ್ಕೆ ಸಂಭಂದಪಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕುಮಾರಸ್ವಾಮಿ ತಮ್ಮ ತಂದೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನೇ ಮನೆಯಿಂದ ಹೊರಹಾಕಿದ್ದರು. ಬೆಂಗಳೂರಿನ ವಿದ್ಯಾರ್ಥಿ ಭವನದ ಬಳಿ ಪ್ರಚಾರ ಮಾಡುತ್ತಿದ್ದಾಗ ಕಲ್ಲಿನಿಂದ ಹೊಡೆಸಿದ್ದರು ಎಂದು ಮಾಧುಸ್ವಾಮಿ ಆರೋಪಿಸಿದ್ದಾರೆ.

ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಗೆ ಹಾಕಿದ್ದಾಗ, ಅವರು ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು, ನಾವು ಆಗ ಟಿಫಿನ್ ಬಾಕ್ಸ್‌ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆವು ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಹಳೆ ವಿದ್ಯಾರ್ಥಿ ಭವನ್ ಎದುರು ಒಮ್ಮೆ ದೇವೇಗೌಡ ಅವರು ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಕಲ್ಲೆಸೆದರು, ಆಗ ನಾನು ಅವರ ಎದುರಿಗೆ ನಿಂತು ಕಲ್ಲು ಬೀಳದಂತೆ ತಡೆದಿದ್ದೆ, ಆ ನಂತರ ನನ್ನನ್ನು ತಬ್ಬಿಕೊಂಡು ಅತ್ತಿದ್ದ ದೇವೇಗೌಡರು, ನನ್ನ ಮಕ್ಕಳು ಇದ್ದಿದ್ದರೆ ನನಗಾಗಿ ಕಲ್ಲೇಟು ತಿನ್ನುತ್ತಿರಲಿಲ್ಲ ಎಂದಿದ್ದರು ಎಂದು ಮಾಧುಸ್ವಾಮಿ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಆಗ ಯಾವ ಮಕ್ಕಳು ದೇವೇಗೌಡರನ್ನು ನೋಡಿಕೊಳ್ಳುತ್ತಿರಲಿಲ್ಲ. ಈಗ ಕುಮಾರಸ್ವಾಮಿ ನನ್ನ ಮುಂದೆ ಬರಲಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಅಂತ ಕೇಳುತ್ತಿನೀ ಎಂದು ಶಾಸಕ ಮಾಧುಸ್ವಾಮಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ,. ಮಾಸನ ಪುತ್ರ ಬಿ.ಎಲ್ ಶಂಕರ್ ಮತ್ತು ವೈ.ಕೆ ರಾಮಯ್ಯ ಯಾಕೆ ಪಕ್ಷ ಬಿಟ್ಟು ಆಚೆ ಹೋದರು. ರಾಜಕೀಯ ಜೀವನದಲ್ಲಿ ನಾನು ಕುಮಾರಸ್ವಾಮಿಗಿಂತ ಹಿರಿಯನಾಗಿದ್ದೇನೆ ಎಂದು ಮಾಧುಸ್ವಾಮಿ ಆ ವಿಡಿಯೋದಲ್ಲಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top