fbpx
ಸಮಾಚಾರ

ಪಿಯುಸಿ ಫಲಿತಾಂಶಕ್ಕೂ ರಾಜಕೀಯ ಬಣ್ಣವನ್ನು ಹಚ್ಚಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಸಂಸದ ಕಟೀಲ್.

ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉಡುಪಿ ಶೇ.92.20, ದಕ್ಷಿಣ ಕನ್ನಡ ಶೇ.90.91, ಕೊಡಗು ಶೇ.83.31 ಫಲಿತಾಂಶ ದಾಖಲಿಸುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನವನ್ನು ಪಡೆದುಕೊಂಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಂಸದ ನಳಿನ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳೇ ಪಿಯುಸಿ ಫಲಿತಾಂಶವನ್ನು ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

“ಉಡುಪಿ – ದಕ್ಷಿಣ ಕನ್ನಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮುಖ್ಯಮಂತ್ರಿಯವರೇ.. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.” ನಳೀನ್ ಕುಮಾರ್ ಟ್ವೀಟ್ ಮಾಡಿದ್ದಾರೆ.

 

 

ಕುಮಾರಸ್ವಾಮಿ ಹೇಳಿದ್ದು ಏನು?
ಉಡುಪಿ, ಕಾರ್ಕಳ ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top