fbpx
ಸಮಾಚಾರ

ಪಿಯು ಫಲಿತಾಂಶ ಪ್ರಕಟ- ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಈ ಭಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಗೊಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಚಿಕ್ಕೋಡಿ ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ ಶೇಕಡಾ 59.56ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿಗಿಂತ ಶೇ 7ರಷ್ಟು ಹೆಚ್ಚಳವಾಗಿದೆ. ಉತ್ತೀರ್ಣ ಪ್ರಮಾಣ 2016ರಲ್ಲಿ ಶೇ 57.2ರಷ್ಟಿತ್ತು. ಕಳೆದ ವರ್ಷ 52.38ಕ್ಕೆ ಕುಸಿದಿತ್ತು. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಎರಡನೇ ಸ್ಥಾನದಲ್ಲಿದೆ. ಕೊಡಗು ಮೂರು ಹಾಗೂ ಉತ್ತರ ಕನ್ನಡ ನಾಲ್ಕನೇ ಸ್ಥಾನ ಗಳಿಸಿವೆ. 2016ರಲ್ಲಿ ದ.ಕನ್ನಡ ಅಗ್ರಪಟ್ಟದಲ್ಲಿತ್ತು.

ಫಲಿತಾಂಶ ಹೇಗಿದೆ?
ಒಟ್ಟು ಹಾಜರಾದ 6,71,653 ವಿದ್ಯಾರ್ಥಿಗಳ ಪೈಕಿ 4,14,587 ಮಂದಿ ಪಾಸ್ ಆಗುವ ಮೂಲಕ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದೆ.

ರಿಸಲ್ಟ್ ನೋಡುವುದು ಹೇಗೆ?
ಅಧಿಕೃತ ವೆಬ್​ಸೈಟ್:​ http://pue.kar.nic.in ಮತ್ತು http://www.karresults.nic.in ಲಾಗ್​ ಆನ್​ ಮಾಡಿ
ಹೋಮ್​ ಪೇಜ್​ನಲ್ಲಿ ‘Karnataka PUC Result 2019’ ಕ್ಲಿಕ್​ ಮಾಡಿ
ನಿಗದಿತ ಸ್ಥಳದಲ್ಲಿ ನಿಮ್ಮ ನೋಂದಾಯಿತ ಸಂಖ್ಯೆ ಮತ್ತು ಪಾಸ್​ವರ್ಡ್​ ನಮೂದಿಸಿ
ಸಬ್​ಮಿಟ್​ ಬಟನ್​ ಕ್ಲಿಕ್​ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top