ಸಮಾಚಾರ

“ನನ್ನಂಥ ಕಚಡಾ ನನ್ಮಗ ಇನ್ನೊಬ್ಬ ಇಲ್ಲ” ಕುಮಾರಸ್ವಾಮಿ ವಿರುದ್ಧ ರೊಚ್ಚಿಗೆದ್ದ ದರ್ಶನ್.

“ನನ್ನಂಥ ಕಚಡಾ ನನ್ಮಗ ಇನ್ನೊಬ್ಬರಿಲ್ಲ. ನನಗೆ ಎರಡು ಮುಖವಿದೆ. ಆ ಕಡೆ ಈ ಕಡೆ ಮುಖ. ಎಲ್ಲೂ ಮಧ್ಯ ಮುಖ ಇಟ್ಟುಕೊಂಡು ಎಲ್ಲೂ ಹೋಗಿಲ್ಲ. ಆದರೆ, ಈ ಚುನಾವಣೆಯಲ್ಲಿ ಮಧ್ಯದಲ್ಲಿ ಮುಖ ಇಟ್ಟುಕೊಂಡಿದ್ದೆ. ನನ್ನಿಂದ ಅಮ್ಮನಿಗೆ ತೊಂದರೆಯಾಗಬಾರದು ಎಂಬ ಒಂದೇ ಉದ್ದೇಶದಿಂದ ನಾನು ಏನು ಮಾತನಾಡಿಲ್ಲ,” ಎಂದು ನಟ ದರ್ಶನ್ ಗುಡುಗಿದ್ದಾರೆ.

ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರವಾಗಿ ಸಾವಿರಾರು ಮಂದಿ ಬೆಂಬಲ ಸೂಚಿಸಿದರು. ಇಷ್ಟು ದಿನ ಮಾತಾಡಬಾರ್ದು ಅಂತ ಇದ್ದೆ. ನನ್ನಂತ ಕಚಡಾ ನನ್ ಮಗ ಮತ್ಯಾರು ಇಲ್ಲ. ರೈತರ ಮಗ, ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರಲ್ಲ, ಅವರು ಒಂದು ಲೋಟ ಹಾಲು ಕರೆದು ತೋರಿಸಲಿ ನೋಡೋಣ. ಬೇಡ, ಹಸು ಮರಿ ಹಾಕಿದಾಗ ಅದಕ್ಕೆ ಏನು ಆಹಾರ ಕೊಡುತ್ತಾರೋ ಹೇಳಿ ಬಿಡಲಿ ನೋಡೋಣ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್‌ಗೆ ದರ್ಶನ್‌ ಸವಾಲು ಹಾಕಿದರು.

ಇಷ್ಟು ದಿನ ಒಂದಿಬ್ಬರು ನನ್ನನ್ನು ಡಿ ಬಾಸ್​ ಎನ್ನುತ್ತಿದ್ದರು. ಆದರೆ ಇಂದು ಕುಮಾರಸ್ವಾಮಿಯಿಂದಾಗಿ ಇವತ್ತು ಇಡೀ ಕರ್ನಾಟಕ ಡಿ ಬಾಸ್​ ಎನ್ನುತ್ತಿದ್ದಾರೆ. ಈ ರೀತಿ ಹೇಳಲು ಕಾರಣ ಕುಮಾರಸ್ವಾಮಿ ಅದಕ್ಕೆ ನಾನು ಅವರಿಗೆ ಥ್ಯಾಂಕ್ಸ್ ಹೇಳ್ತೀನಿ ಎಂದು ಕುಹುಕವಾಡಿದರು.

ಸಿನಿಮಾದವರು ಎಂದು ಬಯ್ಯುತ್ತಾರೆ. ಇವರು 60 ಕೋಟಿ ನಿರ್ಮಾಣ ಮಾಡಿ ಸಿನಿಮಾ ಮಾಡಿದರು. ಈಗ ನಮಗೆ ಬಯ್ಯುತ್ತಾರೆ. ಇದೇ ದುಡ್ಡು ತಂದು ಇಲ್ಲಿ ಅಭಿವೃದ್ಧಿ ಮಾಡಿದ್ದರೆ, ಅದನ್ನು ತೋರಿಸಿ ಮತ ಕೇಳ ಬಹುದಿತ್ತು. ಈ ರೀತಿ ಕಷ್ಟ ಪಡುವ ಅಗತ್ಯವೇ ಇರುತ್ತಿರಲಿಲ್ಲ. ಇವರಂತೆ ನಾವು ಕಾರುಗಳಲ್ಲಿ ಅಬ್ಬರದ ಪ್ರಚಾರ ಮಾಡಲಿಲ್ಲ ನಾವು ಮಾಡಿದ್ದು ಕೇವಲ ಆಟೋದಲ್ಲಿ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top