ಸಮಾಚಾರ

“ಖಾಸಗಿ ಚಾನೆಲ್ ನಲ್ಲಿ ಪ್ರಚಾರವಾದ ಸುಳ್ಳು ಸುದ್ದಿಗೆ ಸ್ಪಷ್ಟಿಕರಣ ಕೊಟ್ಟ ಮಂಡ್ಯ ಯುವತಿ

ಬ್ರೇಕಿಂಗ್ ನ್ಯೂಸ್ ಹಸಿವಿಗೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಸಮಾಜದಲ್ಲಿ ಯಾವುದೇ ವಿದ್ಯಮಾನಗಳು ನಡೆದರೂ ಅಥವಾ ಯಾವುದೇ ವಿಷಯಗಳು ವೈರಲ್ ಆದರೂ ಅವಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸುಳ್ಳು ಸುದ್ದಿಯನ್ನು ಬಿತ್ತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇದೀಗ ಇಂಥ ಕೆಲ ನ್ಯೂಸ್ ಚಾನೆಲ್ ಗಳು ಮಂಡ್ಯದಲ್ಲಿ ನಡೆದ ಘಟನೆಯೊಂದನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ ಪ್ರಸಾರ ಮಾಡಿವೆ.

ಯಶ್ ಪ್ರಚಾರ ಮಾಡುತ್ತಿದ್ದ ತೆರೆದ ವಾಹನದಲ್ಲಿ ಯುವತಿಯೊಬ್ಬಳನ್ನು ಕೆಳಗೆ ಬೀಳದಂತೆ ಅಲ್ಲಿದ್ದವರು ಹಿಡಿಕೊಂಡಿದ್ದರು. ಆದರೆ ಖಾಸಗಿ ವಾಹಿನಿಯೊಂದು ಈ ಘಟನೆಯನ್ನು ತಿರುಚಿ “ಯಶ್ ಎದುರೇ ಮಹಿಳೆಗೆ ಅವಮಾನ ಆಗುತ್ತಿದೆ” ಎಂದು ಸುಳ್ಳು ಸುದ್ದಿ ಬಿತ್ತರಿಸುತ್ತಿತ್ತು. ಹಾಗಾಗಿ ಈ ಬಗ್ಗೆ ಸ್ವತಃ ಆ ಹುಡುಗಿಯೇ ಸ್ಪಷ್ಟನೆ ನೀಡಿದ್ದಾರೆ..

 

 

ನಾನು ವಾಹನದ ಮೇಲೆ ಹತ್ತಿದ್ದಾಗ ಸ್ಲಿಪ್ ಆಗಿ ಬೀಳಬಹುದು ಎಂದು ನಮ್ಮ ತಂದೆಯೇ ನನ್ನನ್ನು ಹಿಡಿದುಕೊಳ್ಳಲು ಅಲ್ಲಿದ್ದವರಿಗೆ ಹೇಳಿದರು. ಇದರಲ್ಲಿ ತಪ್ಪು ಹುಡುಕಬೇಡಿ ಎಂದು ಹೇಳಿದ್ದಾಳೆ. ಇನ್ನು ಈಕೆಯ ತಂದೆಯೂ ಕೂಡ ತಾವೇ ಹಿಡಿದುಕೊಳ್ಳಲು ಹೇಳಿದ್ದು ಎಂದು ಹೇಳಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top