ಸಮಾಚಾರ

ಕ್ರ.ಸಂ. 20ನ್ನು 19 ಎಂದು ಅಪಪ್ರಚಾರ ಮಾಡುತ್ತಿರುವ ಖಾಸಗಿ ಸುದ್ದಿ ವಾಹಿನಿ- ಸುಮಲತಾ ಗರಂ.

ಬ್ರೇಕಿಂಗ್ ನ್ಯೂಸ್ ಹಸಿವಿಗೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಸಮಾಜದಲ್ಲಿ ಯಾವುದೇ ವಿದ್ಯಮಾನಗಳು ನಡೆದರೂ ಅಥವಾ ಯಾವುದೇ ವಿಷಯಗಳು ವೈರಲ್ ಆದರೂ ಅವಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸುಳ್ಳು ಸುದ್ದಿಯನ್ನು ಬಿತ್ತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇದೀಗ ಇಂಥದೇ ಮನಸ್ಥಿತಿಯ ನ್ಯೂಸ್ ಚಾನೆಲ್ ವೊಂದು ಜನರನ್ನು ದಾರಿತಪ್ಪಿಸುವ ಕಾರ್ಯದಲ್ಲಿ ಮಗ್ನರಾಗಿದೆ.

ಮತಪತ್ರದಲ್ಲಿ ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿದ್ದು ಆದರೆ ಈ ಖಾಸಗಿ ಸುದ್ದಿ ವಾಹಿನಿ ಮಾತ್ರ ಸುಮಲತಾ ಅವರದ್ದು ಕ್ರಮಸಂಖ್ಯೆ 19 ಎಂದು ಹೇಳುತ್ತಾ ಮಂಡ್ಯ ಜನರನ್ನು ದಾರಿ ತಪ್ಪಿಸುವ ಕಾಯಕದಲ್ಲಿ ತೊಡಗಿದೆ. ಈ ನಿರ್ದಿಷ್ಟ ಚಾನೆಲ್ ವಿರುದ್ಧ ಹರಿಹಾಯ್ದಿರುವ ಸುಮಲತಾ ಇಂಥಾ ಸುದ್ದಿಗಳ ಕಡೆಗೆ ಗಮನ ಹರಿಸಿದಂತೆ ಮನವಿ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ:

 

ಮಂಡ್ಯದಲ್ಲಿ ಪ್ರಚಾರ ಮಾಡುವಾಗ ಈ ಬಗ್ಗೆ ಉಲ್ಲೇಖಿಸಿರುವ ಸುಮಲತಾ “ಈ ಚಾನೆಲ್ ದುಡ್ಡಿಗೆ ಮಾರಾಟಗೊಂಡಿದೆ. ಅದರಲ್ಲಿ ಬರುವ ಯಾವುದೇ ಸುದ್ದಿಗಳನ್ನು ನಂಬಬೇಡಿ. ಈ ಚಾನೆಲ್ ಅನ್ನು ಯಾರು ನೋಡಬೇಡಿ. ಯಾರು ನೋಡದಿದ್ದರೆ TRP ಇಲ್ಲದೇ ಕ್ಲೋಸ್ ಆಗುತ್ತದೆ. ಇಂಥಾ ಸುಳ್ಳು ಚಾನೆಲ್ ಗಳಿಗೆ ನೀವೇ ಬುದ್ದಿ ಕಲಿಸಬೇಕು. ನಾನೇನು ಮಾಡಿದ್ದೇನೆ ಈ B ಟಿವಿಯವರಿಗೆ …..ನನ್ನ ನ್ಯಾಯಪರವಾದ ಹೆಜ್ಜೆಯನ್ನು ನನ್ನ ಪ್ರಾಮಾಣಿಕವಾದ ಹೆಜ್ಜೆಯನ್ನು ಕಳಕಳಿಯನ್ನು ಯಾಕೆ ಇವರು ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top