fbpx
ಸಮಾಚಾರ

ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಖಾಸಗಿ ವಾಹಿನಿಗೆ ವಾರ್ನಿಂಗ್ ಕೊಟ್ಟ ಅಂಬಿ ಫ್ಯಾನ್ಸ್.

ಬ್ರೇಕಿಂಗ್ ನ್ಯೂಸ್ ಹಸಿವಿಗೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಸಮಾಜದಲ್ಲಿ ಯಾವುದೇ ವಿದ್ಯಮಾನಗಳು ನಡೆದರೂ ಅಥವಾ ಯಾವುದೇ ವಿಷಯಗಳು ವೈರಲ್ ಆದರೂ ಅವಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸುಳ್ಳು ಸುದ್ದಿಯನ್ನು ಬಿತ್ತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇದೀಗ ಇಂಥದೇ ಮನಸ್ಥಿತಿಯ ನ್ಯೂಸ್ ಚಾನೆಲ್ ವೊಂದು ಜನರನ್ನು ದಾರಿತಪ್ಪಿಸುವ ಕಾರ್ಯದಲ್ಲಿ ಮಗ್ನರಾಗಿದೆ.

ಮತಪತ್ರದಲ್ಲಿ ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿದ್ದು ಆದರೆ ಈ ಖಾಸಗಿ ಸುದ್ದಿ ವಾಹಿನಿ ಮಾತ್ರ ಸುಮಲತಾ ಅವರದ್ದು ಕ್ರಮಸಂಖ್ಯೆ 19 ಎಂದು ಹೇಳುತ್ತಾ ಮಂಡ್ಯ ಜನರನ್ನು ದಾರಿ ತಪ್ಪಿಸುವ ಕಾಯಕದಲ್ಲಿ ತೊಡಗಿದೆ. ಈ ನಿರ್ದಿಷ್ಟ ಚಾನೆಲ್ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶಗೊಂಡಿದ್ದು ಚಾನೆಲ್ ಗೆ ಸೀರಿಯಸ್ ವಾರ್ನಿಂಗ್ ಕೊಟ್ಟಿದ್ದಾರೆ.

 

 

ಈ ಚಾನೆಲ್ ದುಡ್ಡಿಗೆ ಮಾರಾಟಗೊಂಡಿದೆ. ಅದರಲ್ಲಿ ಬರುವ ಯಾವುದೇ ಸುದ್ದಿಗಳನ್ನು ನಂಬಬೇಡಿ. ಸುಮಲತಾ ಅವರ ವಿರುದ್ಧ ಯಾವ ಕಾರಣಕ್ಕಾಗಿ ಈ ರೀತಿ ಮಾಡ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. . ಅಂಬಿ ಅಭಿಮಾನಿಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ, ಅಂಬರೀಷ್ ಅಭಿಮಾನಿಗಳಿಗೆ ಏನಾದರೂ ತಲೆಕೆಟ್ಟು ಚಾನೆಲ್ ಕಚೇರಿಗೆ ಮುತ್ತಿಗೆ ಹಾಕಿದರೇ ಪರಿಣಾಮ ನೆಟ್ಟಗಿರುವುದಿಲ್ಲ. ಮತ್ತೊಮ್ಮೆ ಸುಮಲತಾ ವಿರುದ್ಧ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ” ಎಂದು ವಾರ್ನಿಂಗ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top