fbpx
ಸಮಾಚಾರ

ಏಪ್ರಿಲ್ 18- ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಬುಧವಾರ, ಏಪ್ರಿಲ್ 18 2019
ಸೂರ್ಯೋದಯ : 6:06 am
ಸೂರ್ಯಾಸ್ತ: 6:31 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಚೈತ್ರ
ಪಕ್ಷ : ಶುಕ್ಲಪಕ್ಷ
ತಿಥಿ : ಚತುರ್ದಶೀ 19:26 22:24
ನಕ್ಷತ್ರ :PurvaPhalguni 25:51
ಯೋಗ :ಧ್ರುವ 18:32
ಕರಣಂ:ಕುಲವ 11:55 ತೈತುಲ 22:24

ಅಭಿಜಿತ್ ಮುಹುರ್ತ:11:55 am – 12:44 pm
ಅಮೃತಕಾಲ :5:04 pm – 6:31 pm

ರಾಹು ಕಾಲ: 12:19 pm – 1:51 pm
ಗುಳಿಕ ಕಾಲ:10:46 am – 12:19 pm
ಯಮಗಂಡ:7:42 am – 9:14 am

 

ಮನೆಯ ಖರ್ಚುಗಳನ್ನು ನೀವು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಅದು ಇನ್ನೊಂದು ರೀತಿಯಲ್ಲಿ ಕೈ ಮೀರಿ ಹೋಗುವುದು. ಇದರಿಂದ ಕೂಡಿಟ್ಟ ಹಣ ಖರ್ಚಾಗುವುದು.ನಿಮ್ಮ ಬುದ್ಧಿವಂತಿಕೆ ಮತ್ತು ಶ್ರಮ ಗಮನಿಸಿ ಕೆಲವರು ನಿಮಗೆ ಧನ ಸಹಾಯ ಮಾಡಲು ಮುಂದಾಗುವರು.

ನೀವು ನಿಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಲೇಬೇಕು. ಕಾಲಕ್ಕೆ ತಕ್ಕ ಹೊಂದಾಣಿಕೆ ಬದುಕಿನಲ್ಲಿ ಅನಿವಾರ್ಯ. ಇಲ್ಲವಾದರೆ ಜನರ ಪರಿಹಾಸ್ಯಕ್ಕೆ ಗುರಿಯಾಗಬೇಕಾಗುವುದು. ಹಣಕಾಸಿನ ಪರಿಸ್ಥಿತಿ ಅಷ್ಟು ಉತ್ತಮವಾಗಿರುವುದಿಲ್ಲ. ಖರ್ಚು ವೆಚ್ಚಗಳ ಮೇಲೆ ಹತೋಟಿ ಸಾಧಿಸಿ. ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದ ಬೇಡ.

ಕೆಲಸದಲ್ಲಿ ಅತ್ಯಂತ ಅವಸರ ತೋರುವ ನಿಮಗೆ ಅದರಿಂದ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆ ಅರಿವು ಮೂಡುವುದಿಲ್ಲ. ನಿಮ್ಮ ಈ ಸ್ವಭಾವದಿಂದ ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿ. ಈ ವಿಷಯವನ್ನು ಲಘುವಾಗಿ ಪರಿಗಣಿಸಿದರೆ ಮುಂದೆ ಪಶ್ಚಾತ್ತಾಪ ಪಡುವಿರಿ.

ನೀವು ಒಂದು ಕಡೆ ಉಳಿತಾಯಕ್ಕೆ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಖರ್ಚು ಹೆಚ್ಚುತ್ತಾ ಹೋಗಲಿದೆ. ಅನೇಕ ಪ್ರಮುಖರು ನಿಮ್ಮನ್ನು ಭೇಟಿಯಾಗಲು ತಾವಾಗಿಯೇ ಹುಡುಕಿ ಬರಲಿದ್ದಾರೆ. ಮತ್ತೊಬ್ಬರ ಬಗ್ಗೆ ವ್ಯಕ್ತಿಗತವಾಗಿ ಮಾತನಾಡಬೇಡಿ.

 

ಈ ಹಿಂದೆ ನೀವು ಮನೆಯ ಸದಸ್ಯರೊಡನೆ ನಡೆದುಕೊಂಡ ರೀತಿಯಿಂದ ಕಳೆದು ಹೋಗಿದ್ದ ವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸಿ. ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ.

 

ಸದ್ಯಕ್ಕೆ ನೀರಿನಿಂದ ಹೊರ ಬಿದ್ದ ಮೀನಿನ ಪರಿಸ್ಥಿತಿಯಂತೆ ಆಗಿದೆ ನಿಮ್ಮ ಜೀವನ. ಭಗವಂತನ ಆರಾಧನೆಯಿಂದ ದೈವಬಲ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ. ಮತ್ತೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುನ್ನಡೆದರೆ ಜೀವನ ಪ್ರಗತಿ ಪಥದಲ್ಲಿ ಸಾಗುವುದು.

 

ನಿಮಗೆ ಬರಲಿರುವ ಸಂಕಷ್ಟಗಳು ಮಂಜಿನಂತೆ ಕರಗಿ ಹೋಗುವವು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನೂತನ ಕೆಲಸದ ಜವಾಬ್ದಾರಿ ತೆಗೆದುಕೊಳ್ಳಬೇಕಾಗುವುದು, ನಿಮ್ಮ ಮುಂಗೋಪದಿಂದ ಕೆಲವು ಕೆಲಸಗಳು ತಪ್ಪಿ ಹೋಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರದಿಂದಿರಿ.

 

ಅತಿ ಒತ್ತಡದ ಕೆಲಸಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವವು. ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ಅಲಕ್ಷ ಬೇಡ. ಹಿರಿಯರ ಮಾತನ್ನು ಗೌರವಿಸಿ. ಮಡದಿಯ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರುವವು.

 

ಮನುಷ್ಯನಿಗೆ ಆತ್ಮವಿಶ್ವಾಸ ಅತಿ ಮುಖ್ಯ. ಆದರೆ ಅತಿ ಆತ್ಮವಿಶ್ವಾಸ ಕಾರ್ಯಹಾನಿಗೆ ಕಾರಣವಾದೀತು. ಹಾಗೆಂದ ಮಾತ್ರಕ್ಕೆ ಧೃತಿಗೆಡುವ ಅಗತ್ಯವಿಲ್ಲ.ಹಣಕಾಸಿನ ವಿಷಯದಲ್ಲಿ ತೊಂದರೆ ಇಲ್ಲ. ಹಣ ಉಳಿತಾಯದ ಕಡೆ ಗಮನ ಹರಿಸಿ.

ಹಲವು ವಿಷಯಗಳಲ್ಲಿ ನಿಮಗೆ ಗೊಂದಲ ಉಂಟಾಗುವುದು. ಈ ವಿಷಯಗಳ ಬಗ್ಗೆ ಖಚಿತ ನಿಲುವು ತಾಳುವುದು ಒಳ್ಳೆಯದು. ಹಣದ ಹರಿವು ನೀವು ಬಯಸಿದಂತೆ ಇರುವುದು. ಸಂಬಂಧಪಡದ ವಿಷಯಗಳಿಂದಾಗಿ ದಂಪತಿ ಮಧ್ಯೆ ಕಲಹವಾಗುವ ಸಾಧ್ಯತೆ ಇದೆ.

 

 

ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುವವು,ಖರ್ಚಿನ ಮೇಲೆ ನಿಗಾ ಇಡುವುದು ಒಳ್ಳೆಯದು. ಸ್ಥಿರ ಚರ ಆಸ್ತಿ ವಿಚಾರಗಳಲ್ಲಿ ಬಂಧುಗಳ ನಡುವೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಗುರು ಹಿರಿಯರ ಮಧ್ಯಸ್ಥಿಕೆಯಿಂದ ಅನುಕೂಲವಾಗುವುದು.

ಕುಟುಂಬ ಸದಸ್ಯರೊಡನೆ ಸಾಮರಸ್ಯ ಕಾಪಾಡಿಕೊಂಡರೆ ಪ್ರಯೋಜನವಿದೆ. ವ್ಯಂಗ್ಯವಾಗಿ ಮಾತನಾಡಿದರೆ ಉತ್ತಮ ಸಂಬಂಧಗಳು ಕೈ ತಪ್ಪಿಹೋಗುವವು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top