fbpx
ಭವಿಷ್ಯ

ಏಪ್ರಿಲ್ 20- ಇಂದಿನ ಪಂಚಾಂಗ ಮತ್ತು ದಿನಭವಿಷ್ಯ

ಸ್ಥಳ- ಬೆಂಗಳೂರು.
ಶನಿವಾರ, ಏಪ್ರಿಲ್ 20 2019
ಸೂರ್ಯೋದಯ : 6:06 am
ಸೂರ್ಯಾಸ್ತ: 6:31 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಚೈತ್ರ
ಪಕ್ಷ : ಕೃಷ್ಣಪಕ್ಷ
ತಿಥಿ : ಪ್ರತಿಪತ್ 14:20
ನಕ್ಷತ್ರ :ಸ್ವಾತಿ 17:58
ಯೋಗ :ವಜ್ರ 08:26
ಕರಣಂ:ಕುಲವ 14:20 ತೈತುಲ 25:22

ಅಭಿಜಿತ್ ಮುಹುರ್ತ:11:53 am – 12:43 pm
ಅಮೃತಕಾಲ : 9:44 am – 11:14 am

ರಾಹು ಕಾಲ: 9:13 am – 10:46 am
ಗುಳಿಕ ಕಾಲ: 6:08 am – 7:40 am
ಯಮಗಂಡ: 1:51 pm – 3:23 pm

 

 

ನಿಮಗೆ ದೈವ ಬಲ ಕಡಿಮೆ ಇದ್ದರೂ ನೀವು ಮಾಡುತ್ತಿರುವ ಪೂಣ್ಯ ಕಾರ್ಯಗಳಿಂದ ಭಗವಂತನು ನಿಮಗೆ ಒಳಿತನ್ನೇ ಮಾಡುವನು. ಹಣಕಾಸಿನ ಪರಿಸ್ಥಿತಿ ಸುಧಾರಣೆ ಕಷ್ಟವಿದೆ. ಆದರೆ ನಿತ್ಯ ಜೀವನಕ್ಕೆ ತೊಂದರೆ ಇರುವುದಿಲ್ಲ.

ಯಾರೂ ನಿಮ್ಮನ್ನು ಅಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದು. ಆದರೆ ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುತ್ತಾರೆ. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಎಲ್ಲವನ್ನೂ ಪರಿಶೀಲಿಸಿ ಕಾರ್ಯಪ್ರವೃತ್ತರಾಗಿ.

ನೀವು ಮಾಡುತ್ತಿರುವ ಕೆಲಸಕ್ಕೆ ಪ್ರಶಂಸೆ ಸಿಗುವುದು. ಕೇವಲ ನಿಮ್ಮ ಸಂಕಲ್ಪ ಮಾತ್ರದಿಂದಲೇ ಯಶಸ್ಸು ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚುವುದು. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾಯಕ ನಿಷ್ಠೆ ತೋರಿದರೆ ಒಳಿತಾಗುವುದು.

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಮಾತ್ರ ನಿಮ್ಮೊಡನೆ ಇಟ್ಟುಕೊಳ್ಳಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸುವ ಜನರಿದ್ದಾರೆ. ಆದರೆ ಎಲ್ಲಾ ಸಮಸ್ಯೆಗಳಿಂದ ಪಾರಾಗುವಿರಿ.

 

ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಉಪಯೋಗಿಸಿಕೊಳ್ಳುವ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಗೆಳೆಯರ ಗುಂಪಿನಲ್ಲಿ ಹಲವರು ಕಿರಿಕಿರಿ ಮಾಡುವವರಿದ್ದಾರೆ. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡಬೇಡಿ.

 

ಮನಸ್ಸಿನಲ್ಲಿ ಮಂಕು ಕವಿದ ವಾತಾವರಣವಿರುವುದು. ಜೀವನ ನಿಸ್ಸಾರ ಎನಿಸುವುದು. ಚುರುಕುತನ ಕಂಡುಕೊಳ್ಳಲು ಆಂಜನೇಯ ಸ್ತೋತ್ರ ಪಠಿಸಿ. ಕಪ್ಪು ಹಸುವಿಗೆ ಬಾಳೆಹಣ್ಣು ಅಥವಾ ಅಕ್ಕಿ ಬೆಲ್ಲ ನೀಡಿ.

 

ನನ್ನ ಕೈಲಿ ಏನೂ ಆಗುತ್ತಿಲ್ಲ ಎಂಬ ನೆಗೆಟಿವ್‌ ಚಿಂತನೆಯಿಂದ ಗಾಣದ ಎತ್ತಿನಂತೆ ಒಂದೇ ದಾರಿಯಲ್ಲಿ ಸುತ್ತುತ್ತಿರುವಿರಿ. ಸ್ವಲ್ಪ ಅದರಿಂದ ಹೊರ ಬಂದು ನೋಡಿ. ನಿಮ್ಮ ಕರ್ತೃತ್ವ ಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯ ಹೊಂದುವಿರಿ. ಭಯವಿರುವವರೆಗೆ ಜಯವಿಲ್ಲ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿ ರೂಢಿಸಿಕೊಳ್ಳಿ.

 

ನಿಮಗೆ ಲಭ್ಯವಾಗಬೇಕಾದ ಯಶಸ್ಸು ನಿಮ್ಮ ವಿರೋಧಿಗಳ ನಿಯಂತ್ರಣದಲ್ಲಿದೆ. ಆದರೆ ಅದರಿಂದೇನೂ ಹಾನಿಯಿಲ್ಲ. ಹಿರಿಯರ ಅಶೀರ್ವಾದ ಮತ್ತು ಬೆಂಬಲ ನಿಮಗಿರುವುದರಿಂದ ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಹಾಗಂತ ಅವಸರ ಮಾಡಿ ಮೂಗಿನ ತುದಿಯಲ್ಲಿರುವ ಕೋಪದಿಂದಾಗಿ ಅಪ್ರಿಯರಾಗದಿರಿ.

 

ಒತ್ತಡದ ದಿನಗಳು ಕಡಿಮೆಯಾಗಿ ಮನೆಯಲ್ಲಿ ಮತ್ತು ಮನದಲ್ಲಿ ನೆಮ್ಮದಿ ಮೂಡುವುದು.ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ.

ಸಂಪೂರ್ಣ ಯಶಸ್ಸು ಸಂಪಾದಿಸುವಿರಿ. ಇದರಿಂದ ಎದುರಾಳಿಗಳು ಮೂಕ ವಿಸ್ಮಿತರಾಗುವರು. ಅನೇಕ ರೀತಿಯ ತಾಳ್ಮೆ ಹಾಗೂ ಸಮಾಧಾನಗಳು ನಿಮ್ಮ ಇಚ್ಛಿತ ಗುರಿ ತಲುಪಲು ಸಹಕಾರಿಯಾಗಿವೆ.

 

 

ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತಿ ಸಿಗುವುದು.ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಹತ್ತರ ಕೆಲಸಗಳನ್ನು ಆದಷ್ಟು ಮುಂದೂಡಿದರೆ ಒಳಿತು.

ಆಪತ್ಕಾಲದಲ್ಲಿ ಆದವನೇ ನೆಂಟ ಎಂಬುದನ್ನು ಮರೆಯದಿರಿ. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡುವರು. ಈ ಸಲಹೆಗಳನ್ನು ಏಕಚಿತ್ತದಿಂದ ಸ್ವೀಕರಿಸಿ ಮತ್ತು ನಿಮ್ಮ ವಿವೇಚನೆಯಿಂದ ಅದನ್ನು ಬಳಸಿಕೊಳ್ಳಿ. ಅನ್ಯರಿಂದ ಹಣದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಮನೆಯಲ್ಲಿ ಸಣ್ಣಪುಟ್ಟ ವಾದ ವಿವಾದಗಳು ನಡೆಯುವವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top