fbpx
ಭವಿಷ್ಯ

ಏಪ್ರಿಲ್ 24 -ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಬುಧವಾರ, ಏಪ್ರಿಲ್ 24 2019
ಸೂರ್ಯೋದಯ : 6:02 am
ಸೂರ್ಯಾಸ್ತ: 6:33 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಚೈತ್ರ
ಪಕ್ಷ : ಕೃಷ್ಣಪಕ್ಷ
ತಿಥಿ :ಪಂಚಮೀ 11:31
ನಕ್ಷತ್ರ :ಮೂಲ 18:35
ಯೋಗ :ಶಿವ 24:41
ಕಾರಣಂ: ತೈತುಲ 11:31 ಗರಿಜ 24:03

ಅಭಿಜಿತ್ ಮುಹುರ್ತ:11:53 am – 12:43 pm
ಅಮೃತಕಾಲ :11:51 am – 1:32 pm

ರಾಹು ಕಾಲ:12:17 pm – 1:50 pm
ಗುಳಿಕ ಕಾಲ:10:44 am – 12:17 pm
ಯಮಗಂಡ: 7:38 am – 9:11 am

 

 

ಇಷ್ಟು ದಿನ ಬರೀ ಸಮಸ್ಯೆಗಳ ಸರಮಾಲೆಯಿಂದ ದುಗುಡ, ದುಮ್ಮಾನದಿಂದ ಕೂಡಿದ್ದ ಸಂಸಾರದಲ್ಲಿ ತುಸು ನೆಮ್ಮದಿ ಮೂಡಲಿದೆ. ಮಡದಿಯು ಸಕಾಲದಲ್ಲಿ ಮಾಡುವ ಸಹಾಯ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು

ದೈನಂದಿನ ಕೆಲಸಗಳಲ್ಲಿಯೇ ಮುಳುಗಿರುವ ನಿಮಗೆ ಕುಟುಂಬದ ಆಗುಹೋಗುಗಳು ಗಮನಕ್ಕೆ ಬರದೇ ಹೋಗುವ ಸಂಭವವಿರುತ್ತದೆ. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡು ಬರುವುದು.

ಯಾವಾಗಲೂ ಹೊಸತನಕ್ಕೆ ತುಡಿಯುವ ನಿಮಗೆ ಕೆಲವೊಮ್ಮೆ ಅವಸರದ ಬುದ್ಧಿಯಿಂದಾಗಿ ಕಾರ್ಯಗಳು ಕೆಡುವವು.ಅನುಭವಿಗಳೊಂದಿಗೆ ಹಲವು ಬಾರಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಇದರಿಂದ ಹೆಚ್ಚಿನ ನಷ್ಟ ತಪ್ಪಿಸಬಹುದು.

ಆತ್ಮೀಯರನ್ನು ಹಾಗೂ ಹಿರಿಯರನ್ನು ಅಲಕ್ಷಿಸಿ ಮನ ನೋಯಿಸದಿರುವುದು ನಿಮಗೆ ಶ್ರೇಯಸ್ಸು ತರುವುದು. ಬಹಳ ದಿನಗಳ ಮೇಲೆ ನಿಮ್ಮ ಬದುಕಿಗೊಂದು ಹೊಸ ಆಯಾಮ ದೊರೆಯಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿರಿ.

 

ಅತಿಯಾದ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ನಿಮ್ಮ ವಿರುದ್ಧ ಹಿತೈಷಿಗಳಿಂದಲೇ ಪಿತೂರಿ ನಡೆಯಬಹುದು. ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ.

 

ನಿಮ್ಮ ಉದಾಸೀನತೆಯಿಂದಾಗಿ ಹಿಂದೆ ಬಿದ್ದಿದ್ದ ಕೆಲಸಗಳು ಈಗ ಮರಳಿ ಚಾಲನೆ ಪಡೆಯಲಿವೆ. ಅನುಭವದಿಂದ ಪಾಠ ಕಲಿಯುವುದು ಬುದ್ಧಿವಂತರ ಲಕ್ಷ ಣ.

 

ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಗುಣ ಸ್ವಭಾವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ನಿಮ್ಮ ವಿಶ್ವಾಸ ಎಲ್ಲೂ ದುರುಪಯೋಗವಾಗದಂತೆ ನೋಡಿಕೊಳ್ಳಿರಿ. ಮಹತ್ತರ ವಿಷಯಗಳನ್ನು ಆತ್ಮೀಯರೊಂದಿಗೆ ಮಾತ್ರ ಚರ್ಚಿಸುವುದು ಲೇಸು.

 

ನಿಮ್ಮ ಬಗ್ಗೆ ಬೇರೆಯವರಿಗೆ ಇರುವ ಭಾವನೆಗಳನ್ನು ಹಿತಶತ್ರುಗಳು ತಿರುಚಿ ಹೇಳಿ ನಿಮ್ಮ ಸ್ನೇಹಕ್ಕೆ ಹುಳಿ ಹಿಂಡಬಹುದು. ಈ ವಿಷಯದಲ್ಲಿ ಅತಿ ಎಚ್ಚರ ಅಗತ್ಯ. ಯಾವುದಕ್ಕೂ ನಿಮ್ಮ ಬುದ್ಧಿ ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

 

ಬಂಧುಗಳೊಂದಿಗೆ ವಿನಾಕಾರಣ ಕಾಲು ಕೆರೆದುಕೊಂಡು ಜಗಳವಾಡದಿರುವುದು ಉತ್ತಮ. ಇದರಿಂದಾಗಿ ನಿಮಗೆ ಅಪಮಾನವಾಗಬಹುದು. ಮಿತ್ರರು ಕೊಡುವ ಸಲಹೆಗಳನ್ನು ವಿಮರ್ಶಿಸಿ ನಿರ್ಣಯ ತೆಗೆದುಕೊಳ್ಳಿರಿ.

ನಿಮ್ಮ ಶ್ರೇಯಸ್ಸನ್ನು ಸಹಿಸದ ಕೆಲವರು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವರು. ಸ್ವಂತ ಉದ್ಯೋಗಿಗಳಿಗೆ ಹೆಚ್ಚಿನ ಯಶಸ್ಸಿದೆ. ಆರೋಗ್ಯದ ಕಡೆ ಅಲಕ್ಷ ್ಯ ಬೇಡ.

 

 

ಪ್ರತಿಯೊಂದನ್ನು ವಿಭಿನ್ನ ರೀತಿಯಲ್ಲಿ ಯೋಚಿಸುವ ನಿಮಗೆ ಮೇಲಧಿಕಾರಿಗಳ ಬೆಂಬಲವಿದೆ. ರಚನಾತ್ಮಕ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಹೊಸ ಹೊಸ ಯೋಜನೆಗಳಿಗೆ ಹಣಕಾಸಿನ ಸಹಾಯ ನಿರಂತರವಾಗಿ ಹರಿದು ಬರಲಿದೆ. ಯಶಸ್ಸು ನಿಮ್ಮ ಬೆನ್ನಿಗೆ ಇದೆ.

ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ನಿಮಗೆ ಇದರ ಪರಿಣಾಮವಾಗಿ ಜವಾಬ್ದಾರಿ ಹೆಚ್ಚಾಗುವುದಲ್ಲದೆ ಸಾಮಾಜಿಕವಾಗಿ ಗೌರವ ಹೆಚ್ಚಲಿದೆ. ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಸಂಗಾತಿಯಿಂದ ಸಲಹೆ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top