fbpx
ಸಮಾಚಾರ

ಮತ್ತೊಂದು ಬಿಜೆಪಿ ಪಟ್ಟಿ ಬಿಡುಗಡೆ: ಟಿಕೆಟ್ ಗಿಟ್ಟಿಸಿಕೊಂಡ 2011ರ ವಿಶ್ವಕಪ್ ಹೀರೊ, ಎಲ್ಲಿಂದ ಸ್ಪರ್ಧೆ?

ಬಿಜೆಪಿ ಮತ್ತೊಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪೂರ್ವ ದೆಹಲಿಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ 2011ರ ವಿಶ್ವಕಪ್ ಹೀರೊ ಗೌತಮ್ ಗಂಭೀರ್ ಸ್ಪರ್ಧಿಸುತ್ತಿದ್ದಾರೆ. ಗೌತಮ್ ಗಂಭೀರ್ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದು ಇದೀಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ದೆಹಲಿಯ ಏಳು ಲೋಕಸಭೆ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಿಗೆ ಬಿಜೆಪಿ ಸೋಮವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತು. ಪೂರ್ವ ದೆಹಲಿಯಿಂದ ಮಾಜಿ ಕ್ರಿಕೆಟಿಕ ಗೌತಮ್‌ ಗಂಭೀರ್‌ ಆಭ್ಯರ್ಥಿಯಾದರೆ, ಮೀನಾಕ್ಷಿ ಲೇಖಿ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 2014ರಲ್ಲೂ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಇನ್ನು ಕಾಂಗ್ರೆಸ್​ 2008ರ ಬೀಜಿಂಗ್ ಒಲಂಪಿಕ್​ನ ಕಂಚಿನ ಪದಕ ವಿಜೇತ ಬಾಕ್ಸರ್​ ವಿಜೇಂದರ್​​ ಸಿಂಗ್ ಅವರನ್ನು ದೆಹಲಿ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಜೇಂದರ್​ ಅವರ ಹರಿಯಾಣದಲ್ಲಿನ ಪೊಲೀಸ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿಯ ಹಾಲಿ ಸಂಸದ ರಮೇಶ್ ಬಿಧೂರಿ ಅವರ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top