fbpx
ಸಮಾಚಾರ

ಒಲಂಪಿಕ್ ಪದಕ ಗೆದ್ದಿದ್ದ ಬಾಕ್ಸರ್ ಪಟು ವಿಜೇಂದರ್‌ಗೆ ಕಾಂಗ್ರೆಸ್ ಟಿಕೆಟ್- ಈ ಕ್ಷೇತ್ರದಿಂದ ಸ್ಪರ್ಧೆ!

ಭಾರತದ ಪ್ರಸಿದ್ಧ ಬಾಕ್ಸಿಂಗ್ ಕ್ರೀಡಾಪಟು ವಿಜೇಂದ್ರ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ವಿಜೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರು ಹರಿಯಾಣದಲ್ಲಿನ ಪೊಲೀಸ್​ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ.

ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರಕ್ಕೆ ಇನ್ನೋರ್ವ ಬಾಕ್ಸರ್ ಸುಶೀಲ್ ಕುಮಾರ್ ಹೆಸರೂ ಕೂಡ ಕೇಳಿಬಂದಿತ್ತು. ಕಾಂಗ್ರೆಸ್ ಕೇಂದ್ರ ಸಮಿತಿಗೆ ಸುಶೀಲ್ ಹೆಸರನ್ನೇ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಬದಲಾಯಿಸಿ ವಿಜೇಂದರ್ ಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ತನಗೆ ಅವಕಾಶ ನೀಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಕೃತಜ್ಞತೆ ಸಲ್ಲಿಸುವೆ. 20 ವರ್ಷಗಳ ಬಾಕ್ಸಿಂಗ್ ವೃತ್ತಿಜೀವನದಲ್ಲಿ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದೇನೆ. ಇದೀಗ ನನ್ನ ದೇಶದಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

 

 

ಇನ್ನೂ ವಿಜೇಂದರ್​ ಸಿಂಗ್​ ಹಾಲಿ ಸಂಸದ ಬಿಜೆಪಿಯ ರಮೇಶ್​ ಬಿಧೂರಿಯನ್ನು ಎದುರಿಸಲಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಧೂರಿ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಕರ್ನಲ್​ ದೇವಿಂದರ್​ ಸೆಹ್ರಾವತ್​ರ ವಿರುದ್ಧ ಗೆಲುವು ಸಾಧಿಸಿದ್ರು. ಈ ಸಲ ಅವರನ್ನು ಎದುರಿಸಲು ಕಾಂಗ್ರೆಸ್​ ವಿಜೇಂದರ್ ಸಿಂಗ್​ರನ್ನ ಕಣಕ್ಕಿಳಿಸಿದೆ. ಮೇ12 ರಂದು ದೆಹಲಿಯ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top