fbpx
ಸಮಾಚಾರ

“ವಿಷ್ಣುವರ್ಧನ್ ಧರ್ಮಸ್ಥಳಕ್ಕೆ ಬಂದಾಗ ಖುರ್ಚಿ ಮೇಲೆ ಕೂರುತ್ತಿರಲಿಲ್ಲ, ಕಾಲು ಬಳಿ ಕೂರುತ್ತಿದ್ದರು” ವೀರೇಂದ್ರ ಹೆಗ್ಗಡೆ.

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಮೊನ್ನೆಯಷ್ಟೇ ಶುರುವಾಗಿದ್ದು ಸೀಸನ್ ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಪುಟಗಳನ್ನ ಪರಿಚಯಿಸಿದ ಹೆಗ್ಗಡೆಯವರು ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರ ಭಕ್ತಿ ಬಗ್ಗೆ ವೀಕ್ಷಕರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಚಿತ್ರರಂಗಕ್ಕೂ ಮತ್ತು ಧರ್ಮಸ್ಥಳಕ್ಕೂ ಇರುವ ಅವಿನಾಭಾವ ಸಂಭಂದದ ಬಗ್ಗೆ ಮಾತನಾಡುವಾಗ ವಿಷ್ಣುವರ್ಧನ್ ಅವರ ಬಗ್ಗೆ ಹೇಳುತ್ತಾ ‘ವಿಷ್ಣುವರ್ಧನ್ ಅವರು ನಮಗೆ ಬಹಳ ಗೌರವ ಕೊಡುತ್ತಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಅವರು ಧರ್ಮಸ್ಥಳಕ್ಕೆ ಬಂದಾಗಲೆಲ್ಲಾ ಕುರ್ಚಿಯಲ್ಲಿ ಕುಳಿತುಕೊಳ್ಳಿ ಅಂತ ಎಷ್ಟೇ ಹೇಳಿದರೂ ಕುರ್ಚಿ ಮೇಲೆ ಕೂರುತ್ತಿರಲಿಲ್ಲ.. ಇಲ್ಲ ಇಲ್ಲ ಎಂದು ನಮ್ಮ ಕಾಲು ಬಳಿಯೇ ಬಂದು ಕೂರುತ್ತಿದ್ದರು.”

“ಹೀಗೆ ಮಾತನಾಡುತ್ತಾ ಕೂರುತ್ತಿದ್ದ ವಿಷ್ಣುವರ್ಧನ್, ‘ಆಮೇಲೆ ನಿಮಗೆ ಸಮಯ ಆಯ್ತು ಅನಿಸುತ್ತೆ, ಊಟಕ್ಕೆ ಹೋಗಿ ಅಂದ್ರೆ ಇಲ್ಲ ಗುರುಗಳೇ ನೀವು ಮಾತನಾಡಿ, ನಾನು ಕೇಳುತ್ತಾ ಕೂರುತ್ತೇನೆ ಅಂತ ಇರ್ತಿದ್ರು’ ಎಂದು ಹೆಗ್ಗಡೆಯವರು ವಿಷ್ಣುವರ್ಧನ್ ಅವರ ಭಕ್ತಿಯ ಬಗ್ಗೆ ವಿವರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top