fbpx
ಸಮಾಚಾರ

ಶ್ರೀಲಂಕಾ ಬಾಂಬ್ ಸ್ಫೋಟ: ಗಣೇಶ್ ಸ್ನೇಹಿತರು ಕೂಡ ನಿಧನ, ನೋವು ತೋಡಿಕೊಂಡ ನಟ.

ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಟ ಗಣೇಶ್ ಕೂಡ ತಮ್ಮ ಪ್ರೀತಿಯ ಸ್ನೇಹಿತರನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ನೋವನ್ನು ಹಂಚಿಕೊಂಡಿರುವ ಗಣೇಶ್ ಗೆಳೆಯರ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ.. ಪುಟ್ಟರಾಜು ಮತ್ತು ಮರೀಗೌಡ ಮೃತ ಪಟ್ಟ ಗಣೇಶ್ ಗೆಳೆಯರಾಗಿದ್ದಾರೆ.

‘ನೀವು ಇನ್ನಿಲ್ಲ ಎನ್ನುವ ಸುದ್ದಿಯನ್ನು ನಂಬಲು ಆಗುತ್ತಿಲ್ಲ. ನನಗೆ ಆಗುತ್ತಿರುವ ದುಃಖವನ್ನು ಹೇಳಲು ಪದಗಳಿಲ್ಲ. ನನ್ನ ಪ್ರೀತಿಯ ಗೆಳೆಯರಾದ ಪುಟ್ಟರಾಜು ಮತ್ತು ಮರೀಗೌಡ ಇಬ್ಬರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ.” ಎಂದು ಟ್ವೀಟ್ ಮಾಡಿದ್ದು ಉಗ್ರರ ದಾಳಿಯಲ್ಲಿ ಹತರಾದ ಎಲ್ಲರಿಗೂ ಸಂತಾಪ ಸೂಚಿಸಿದ್ದಾರೆ.

ಇನ್ನು ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಭಾನುವಾರವೇ ಸರಣಿ ಬಾಂಬ್​ ಸ್ಪೋಟ ಸಂಭವಿಸಿದ ಘಟನೆ ನಡೆದಿದೆ. ಈ ಬಾಂಬ್ ಸ್ಫೋಟದಲ್ಲಿ ಮೃತಪಟ್ವರ ಸಂಖ್ಯೆ 290ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಕನಿಷ್ಠ ಆರು ಮಂದಿ ಭಾರತೀಯರು ಸೇರಿದ್ದಾರೆ. ಒಟ್ಟು 27 ವಿದೇಶಿಯರು ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 500 ಮಂದಿಗೆ ಗಾಯಗಳಾಗಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top