fbpx
ಸಮಾಚಾರ

“ನನ್ನ ವಿಷ್ಯಕ್ಕೆ ಯಾರಾದರೂ ಬಂದ್ರೆ ನಾನಂತೂ ಸುಮ್ಮನೆ ಬಿಡಲ್ಲ” ಚುನಾವಣೆ ಬಳಿಕ ಯಶ್ ವಾರ್ನಿಂಗ್.

ಈ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಇಡೀ ಇಂಡಿಯಾವೇ ಮಂಡ್ಯ ಮೇಲೆ ಕಣ್ಣು ನೆಟ್ಟಿತ್ತು. ಮತದಾನ ಮುಗಿದ ನಂತರವೂ ರಾಜಕೀಯ ಕೆಸರೆರೆಚಾಟ ಮುಂದುವರೆದಿದ್ದು ಸುಮಲತಾ ಪರ ಪ್ರಚಾರ ಮಾಡಿದ್ದ ನಟ ಯಶ್ ವಿರೋಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಚುನಾವಣೆ ಮುಗಿದ ನಂತರ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ”ನನ್ನ ಪರವಾಗಿ ಬೆಂಬಲ ನೀಡಿದವರಿಗೆ, ಪ್ರಚಾರ ಮಾಡಿದವರಿಗೆ ತೊಂದರೆ ನೀಡಲಾಗುತ್ತಿದೆ. ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದರು.

ಯಶ್ ವಾರ್ನಿಂಗ್:
ಇದಕ್ಕೆ ಪ್ರತಿಕ್ರಿಯೇ ನೀಡಿರುವ ನಟ ಯಶ್ ”ನಮ್ಮನ್ನ ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಾವು ಮನೆ ಮಕ್ಕಳಂತೆ ಕೆಲಸ ಮಾಡಿದ್ದೀವಿ. ನಮ್ಮನ್ನ ಟಾರ್ಗೆಟ್ ಮಾಡೋರು ಹುಷಾರಾಗಿರಬೇಕು, ನಾವು ಜನಗಳ ಆಸ್ತಿ. ನಮ್ಮನ್ನ ಏನೂ ಮಾಡೋಕೆ ಆಗಲ್ಲ. ಯಾರಾದರೂ ನನ್ನ ವಿಷ್ಯಕ್ಕೆ ಬಂದ್ರೆ ನಾನಂತೂ ಸುಮ್ಮನೆ ಬಿಡಲ್ಲ” ಎಂದು ರಾಕಿಂಗ್ ಸ್ಟಾರ್ ಯಶ್ ಎಚ್ಚರಿಕೆ ನೀಡಿದ್ದಾರೆ.

ಅಂದಹಾಗೆ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ತೀವ್ರವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಹಾಗೆಂದು ಅವರಿಗೆ ಮಂಡ್ಯದಲ್ಲಿನ ಗೆಲುವು ಸುಲಭವಲ್ಲ. ಅವರ ಎದುರು ಇರುವುದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಷ್. ಅವರಿಗೆ ಬಿಜೆಪಿಯ ಬೆಂಬಲ ದೊರಕಿದೆ. ಕಾಂಗ್ರೆಸ್‌ನ ಅತೃಪ್ತ ಮುಖಂಡರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇಲ್ಲಿ ನಿಕಟ ಪೈಪೋಟಿ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top